
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 56 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ 6 ದಿನ ಮೊಟ್ಟೆ ವಿತರಿಸಲಾಗುತ್ತದೆ ಎನ್ನಲಾಗಿತ್ತು. ಇಂದು ಇಂದಿನಿಂದ (ಸೆಪ್ಟೆಂಬರ್.25) ಯಾದಗಿರಿ ಜಿಲ್ಲೆ ಅರಕೇರಾ ಕೆ.ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡುವ ಮೂಲಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದ್ದಾರೆ.
ಇನ್ನು ಸರ್ಕಾರ 2 ದಿನ ಮೊಟ್ಟೆ ಪೂರೈಸಿದರೆ, ಉಳಿದ ನಾಲ್ಕು ದಿನ ಅಜೀಂ ಪ್ರೇಮ್‌ಜಿ ಫೌಂಡೇಷನ್ ನೀಡಲಿದೆ. ಮೂರು ವರ್ಷ ಪೂರೈಸಲು 1,500 ಕೋಟಿ ರೂಪಾಯಿ ನೆರೆವು ನೀಡಲು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ನಡುವೆ ಜುಲೈನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
Poll (Public Option)

Post a comment
Log in to write reviews