
ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸಬರ ಎಂಟ್ರಿಯಾಗಿದ್ದು, 2025 ರ ವೇಳೆಗೆ ಐಪಿಎಲ್ಗೂ ಮುನ್ನ ಎಲ್ಲಾ ತಂಡಗಳಲ್ಲಿ ಬದಲಾವಣೆಯ ಆರಂಭವಾಗಿದೆ. ಗೌತಮ್ ಗಂಭೀರ್ರವರು ಈ ಮೊದಲು ತಂಡದ ಮೆಂಟರ್ ಆಗಿದ್ದರು. ಆದರೆ ಅವರ ಸ್ಥಾನಕ್ಕೆ ಅನುಭವಿ ಕ್ರಿಕೆಟಿಗ ಡ್ವೇನ್ ಬ್ರಾವೋ ಅವರು ಮೆಂಟರ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ
ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದ ಬ್ರಾವೋ, ಇಂಜುರಿ ಕಾರಣದಿಂದಾಗಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಸಿಎಸ್ಕೆ ತಂಡದೊಂದಿಗಿನ ಬಹಳ ವರ್ಷಗಳಿಂದ ಬಂಧವನ್ನು ಬ್ರಾವೋ ಮುರಿದುಕೊಂಡಿದ್ದಾರೆ. ಕಳೆದ ಆವೃತ್ತಿಯವರೆಗೂ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಾವೋ, ಇದೀಗ ಕೆಕೆಆರ್ ತಂಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಐಪಿಎಲ್‌ನಲ್ಲಿ ಸಿಎಸ್ಕೆ ತಂಡವನ್ನು ಬ್ರಾವೋರವರು ಪ್ರತಿನಿಧಿಸುತ್ತಿದ್ದು, ಸಿಪಿಎಲ್‌ನಲ್ಲಿ ಕೆಕೆಆರ್ ಒಡೆತನದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದರು. ಇದೀಗ ಅದೇ ಒಡನಾಟವನ್ನು ಐಪಿಎಲ್‌ನಲ್ಲೂ ಬ್ರಾವೋ ಮುಂದುವರೆಸಿಕೊಂಡು ಮುಂದಿನ ಆವೃತ್ತಿಯಿಂದ ಈ ಹಿಂದೆ ಕೆಕೆಆರ್ ತಂಡದಲ್ಲಿ ಗೌತಮ್ ಗಂಭೀರ್ ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಲಿದ್ದಾರೆ.
Poll (Public Option)

Post a comment
Log in to write reviews