
ಬೆಂಗಳೂರು:ನಟ ದುನಿಯಾ ವಿಜಯ್ ಹಾಗು ಪತ್ನಿ ನಾಗರತ್ನ ವಿಚ್ಚೇದನ ತೀರ್ಪು ಇಂದು ಮಧ್ಯಾಹ್ನ ಹೊರ ಬೀಳಲಿದೆ. 2018ರಲ್ಲಿ ದುನಿಯಾ ವಿಜಯ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಅದರ ತೀರ್ಪು ಇಂದು ಹೊರಬೀಳಲಿದೆ.
ಈ ಸಂಬಂಧ 2019ರಲ್ಲಿ ದುನಿಯಾ ವಿಜಿ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದು ವಿಜಯ್ ಹೇಳಿದ್ದರು. ಅದಕ್ಕೆ ನಾಗರತ್ನ ಜೀವನಾಂಶ ನೀಡಿರುವ ದಾಖಲೆ ಕೊಡಿ ಎಂದು ಕೇಳಿದ್ದರು. ಅಲ್ಲದೆ ಪ್ರತಿ ಸಲವೂ ಕೋರ್ಟ್‌ಗೆ ಬಂದಾಗ ಗಂಡ ಬೇಕು ಎಂದು ಹೇಳುತ್ತಿದ್ದರಂತೆ. ಸದ್ಯ ಮಕ್ಕಳನ್ನು ಚಿತ್ರರಂಗಕ್ಕೆ ತರುವ ಪ್ರಯತ್ನದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.
Poll (Public Option)

Post a comment
Log in to write reviews