2024-12-24 06:37:52

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

‘ಬೇಗೂರು ಕಾಲೋನಿ’ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

ನಟ ದುನಿಯಾ ವಿಜಯ್ (Duniya Vijay) ಕನ್ನಡ ಚಿತ್ರರಂಗಕ್ಕೆ ಭೀಮ ಎಂಬ  ಬಲ ತುಂಬಿರುವ ಸಿನಿಮಾವನ್ನು  ನೀಡಿದ್ದಾರೆ. ದುನಿಯಾ ವಿಜಯ್ ಅವರು ‘ಬಿಗ್ ಬಾಸ್’ ಖ್ಯಾತಿಯ (Bigg Boss) ರಾಜೀವ್ ಹೊಸ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ನಟ ದುನಿಯಾ ವಿಜಯ್ (Duniya Vijay) ಹೊಸಬರಿಗೆ ಸದಾ ಬೆಂಬಲವಾಗಿ ನಿಲ್ತಾನೆ ಇರುತ್ತಾರೆ.  ಬೇಗೂರು ಕಾಲೋನಿ’ (Begur Colony) ಚಿತ್ರಕ್ಕೆ ಡೈರೆಕ್ಟರ್ ಮಂಜು ಕಥೆ ಬರೆದು ನಿರ್ದೇಶಿಸಲಿದ್ದಾರೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ಎನ್ ಸುರೇಶ್, ಖ್ಯಾತ ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಮತ್ತಿತರರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗಲ್ಲ, ಕಾಲೋನಿಯೇ ಶಕ್ತಿ ಎಂದಿದ್ದಾರೆ. ಹೋರಾಟದ ಕಥೆ ಇಟ್ಟುಕೊಂಡು ಮಾಡಿರುವ ‘ಬೇಗೂರು ಕಾಲೋನಿ’ ಸಿನಿಮಾವಿದು. ರಾಜೀವ್ ಅವರು ಸಿನಿಮಾಗಾಗಿ ಹಾರ್ಡ್ ವರ್ಕ್ ಮಾಡುತ್ತಾರೆ. ನಿರ್ಮಾಪಕರು ನಮ್ಮ ಊರಿನ ಕಡೆಯವರು ನಿರ್ಮಾಪಕ ಹಾಗೂ ನಿರ್ದೇಶಕ ಮಂಜು ಅವರಿಗೂ  ಒಳ್ಳೆಯದಾಗಲಿ ಎಂದು ನಟ  ವಿಜಯ್ ಕುಮಾರ್ ಮಾತನಾಡಿದ್ದಾರೆ.

ನಿರ್ದೇಶಕ ಮಂಜು ಮಾತನಾಡಿ, ಕಾಲೋನಿ ಸೊಸೈಟಿ, ಎಲ್ಲಾ ರೀತಿ ಜನ ವಾಸ ಮಾಡ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆಯಿದು. ಇದು ಒಂದು ಹೋರಾಟದ ಕಥೆ ಎಂದಿದ್ದಾರೆ. ನನಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು, ನಾನು ಎಂದಿಗೂ ಮೆರೆಯುವುದಿಲ್ಲ ಎಂದರು.

ನಿರ್ದೇಶಕ ಮಂಜು ಅವರ ಕೆಲಸ ಬೆಳ್ಳಿ ಪರದೆಯ ಮೇಲೆ ಕಾಣುತ್ತಿದೆ. ಅವರು ನನಗೆ ಸತತ 15 ವರ್ಷಗಳ ಪರಿಚಯ.  ತನಗೆ ಏನು ಬೇಡ ಎಲ್ಲರ ಹೊಟ್ಟೆ ತುಂಬಿದರೆ ಸಾಕು ಎಂದು ಕೆಲಸ ಮಾಡುವ ವ್ಯಕ್ತಿ. ಇವತ್ತು ಇಷ್ಟು ಜನ ಒಟ್ಟುಗೂಡಿಸುವ ಕೆಲಸ ಕೂಡ ಅವರದ್ದು ಹಾಗೂ ನಿರ್ಮಾಪಕರದ್ದು. ನನ್ನ ಪಾತ್ರ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ ಎಂದು ನಟ ರಾಜೀವ್ ಮಾತನಾಡಿದರು.

ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್‌ನಲ್ಲಿ ಎಂ.ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಸೇರಿದಂತೆ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಕೃಷ್ಣ ಮುರಳಿ, ಬಾಲ ರಾಜವಾಡಿ ಬಣ್ಣ ಹಚ್ಚಿದ್ದಾರೆ. ಇನ್ನೇನು ಶೀಘ್ರದಲ್ಲೇ ಚಿತ್ರತಂಡ ಟೀಸರ್ ರಿಲೀಸ್ ಮಾಡಲಿದೆ ಎಂದಿದ್ದಾರೆ.

Post a comment

No Reviews