2024-12-24 06:07:14

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭೀಮ’ ಸಿನಿಮಾ ನೋಡುತ್ತಿದ್ದ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ದುನಿಯಾ ವಿಜಯ್

ಬೆಂಗಳೂರಿನ ಅಂಜನ್ ಥಿಯೇಟರ್​ನಲ್ಲಿ ಭೀಮ ಚಿತ್ರವನ್ನು ನೋಡುತ್ತಿದ್ದ ಫ್ಯಾನ್ಸ್​ಗೆ ದುನಿಯಾ ವಿಜಯ್​ ಸರ್​ಪ್ರೈಸ್ ಕೊಟ್ಟಿದ್ದಾರೆ. ಸಿನಿಮಾ ಮುಗಿದ ತಕ್ಷಣ ದುನಿಯಾ ವಿಜಯ್ ಕಾಣಿಸಿಕೊಂಡರು. ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಯಿತು. ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಸಾಕಷ್ಟು ರಾ ಆಗಿ ಸಿನಿಮಾ ಮೂಡಿ ಬಂದಿದೆ ಎಂಬುದು ಹಲವರ ಅಭಿಪ್ರಾಯ.

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಬೆಂಗಳೂರಿನ ಅಂಜನ್ ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡುತ್ತಿದ್ದ ಫ್ಯಾನ್ಸ್​ಗೆ ದುನಿಯಾ ವಿಜಯ್​ ಸರ್​ಪ್ರೈಸ್ ಕೊಟ್ಟಿದ್ದಾರೆ. ಸಿನಿಮಾ ಮುಗಿದ ತಕ್ಷಣ ದುನಿಯಾ ವಿಜಯ್ ಕಾಣಿಸಿಕೊಂಡರು. ಈ ವೇಳೆ ಫ್ಯಾನ್ಸ್ ಕಡೆ ಕೈಬೀಸಿದ್ದಾರೆ. ಅವರನ್ನು ನೋಡಿ ಫಿಧಾ ಆದ ಪ್ರೇಕ್ಷಕರು ಪೋಟೋಗಾಗಿ ಬೆನ್ನುಹತ್ತಿದರು. ಅಷ್ಟೊಂದು ಸಂಖ್ಯೆಯಲ್ಲಿ ಫ್ಯಾನ್ಸ್ ನುಗ್ಗಿದರೆ ಅವರನ್ನು ನಿಯಂತ್ರಿಸೋದು ಕಷ್ಟ ಆಗಬಹುದು ಎಂದು ದುನಿಯಾ ವಿಜಯ್ ಅವರು ಅಲ್ಲಿಂದ ಓಡಿದ್ದಾರೆ.

 

Post a comment

No Reviews