ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ಸೇತುವೆ ಮೇಲಿನ ಸಿಸಿ ರಸ್ತೆ ಕಿತ್ತು ಸಂಚಾರಕ್ಕೆ ಅಡಚಣೆ

ಕಲಬುರಗಿ: ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ಕಳೆದ ಮರ್ನಾಲ್ಕು ದಿನಗಳಿಂದ ದಂಡೊತಿ ಗ್ರಾಮದ ಹೊರವಲಯದಲ್ಲಿರುವ ಸೇತುವೆಯ ಸಿಸಿ ರಸ್ತೆ ಕಿತ್ತು ಹೊಗಿದ್ದು, ರಸ್ತೆ ಸಂಚಾರ ನಿಂತಿದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಡೂರ ಶ್ರೀನಿವಾಸಲು ಸೇತುವೆ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಸೇತುವೆ ಮೇಲೆ ಸತತ ಎರಡು ದಿನಗಳು ನೀರು ಹರಿದಿದ್ದರಿಂದ ನೀರಿನ ರಭಸಕ್ಕೆ ಸೇತುವೆ ಮೇಲಿನ ಸಿಸಿ ರಸ್ತೆ ಮತ್ತು ಸುರಕ್ಷತೆಗಾಗಿ ಹಾಕಿರುವ ಕಂಬಗಳು ಕಿತ್ತು ಹೋಗಿರುವುದರಿಂದ ಸೇತುವೆ ಮೇಲೆ ಸಿಸಿ ರಸ್ತೆಯು ಚೆಲ್ಲಾಪಿಲ್ಲಿಯಾಗಿ ಸೇತುವೆಯ ತುಂಬಾ ಬಿದ್ದಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ.
ಹಾಗಾಗಿ ಸಾರ್ವಜನಿಕರ ಸುರಕ್ಷತೆಯ ಹಿನ್ನಲೆಯಲ್ಲಿ ಸೇತುವೆ ಮೇಲೆ ಬಿದ್ದಿರುವ ಸಿಸಿ ರಸ್ತೆಯನ್ನು ತೆಗೆಯುವವರೆಗೂ ಮತ್ತು ಸೇತುವೆ ಸುರಕ್ಷತೆ ಬಗ್ಗೆ ಅಧಿಕಾರಿಗಳು ಸ್ಪಷ್ಟಿಕರಣ ನೀಡುವವರೆಗೆ ಸೇತುವೆ ಮೇಲಿನ ರಸ್ತೆ ಸಂಚಾರವನ್ನು ನಿಲ್ಲಿಸಲಾಗಿದೆ. ಲೋಕೊಪಯೋಗಿ ಅಧಿಕಾರಿಗಳು ಸೇತುವೆ ಸುರಕ್ಷತೆ ಬಗ್ಗೆ ವರದಿ ನೀಡಿದ ನಂತರ ಸಾರ್ವಜನಿಕರಿಗೆ ಸಂಚಾರದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿವೈಎಸ್‍ಪಿ ಶಂಕರಗೌಡ ಪಾಟೀಲ್ ತಿಳಿಸಿದ್ದಾರೆ.
Poll (Public Option)

Post a comment
Log in to write reviews