ಕರ್ನಾಟಕ
ಭಾರೀ ಮಳೆಗೆ ಉಡುಪಿಯಲ್ಲಿ ಕೃಷಿಭೂಮಿಗಳು ಜಲಾವೃತ ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ

ಉಡುಪಿ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬೈಂದೂರು ತಾಲೂಕು ನೀರಲ್ಲಿ ಮುಳುಗಿ ಹೋಗಿದೆ.
ಜಿಲ್ಲೆಯ ಬೈಂದೂರಿನಲ್ಲಿ ತಗ್ಗು ಪ್ರದೇಶಗಳಿಗೆ ಪ್ರವಾಹ ಭೀತಿ ಹೆಚ್ಚಾಗಿದೆ. ವರುಣನ ಆರ್ಭಟದಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ಕೃಷಿಭೂಮಿ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ಮಳೆಯ ಸಂಪೂರ್ಣ ಚಿತ್ರಣ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನೂ ಜಿಲ್ಲೆಯ ಕೋಟ ಹಾಗೂ ಸಾಹೇಬರಕಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಗೆ ಸೌಪರ್ಣಿಕ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಕೋಟ ಬನ್ನಾಡಿ ಪರಿಸರದಲ್ಲಿ ನೀರು ತುಂಬಿಹರಿಯುತ್ತಿದೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ
ರಸ್ತೆ ಸಂಚಾರ ಬಂದ್ ಮಾಡಿದ್ರಿಂದ ಪರ್ಯಾಯವಾಗಿ ಬ್ರಹ್ಮಾವರ ಬಾರ್ಕೂರು ಮೂಲಕ ಸಂಚರಿಸಲು ಸೂಚಿಸಲಾಗಿದೆ. ಇನ್ನೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Poll (Public Option)

Post a comment
Log in to write reviews