
ಬೆಂಗಳೂರು: ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿರುವಂತಹ ಘಟನೆ ನಡೆದಿದೆ ಎನ್ನಲಾಗಿದೆ. ಮದ್ಯಪಾನ ಮಾಡಿ ಚಾಲಕ ಟಿಪ್ಪರ್ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಟಿಪ್ಪರ್ ಟಾಪ್ಗೆ ವಿದ್ಯುತ್ ಕಂಬದ ವೈರ್ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಇದನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಸದ್ಯ ಜೆಸಿಬಿ ಮುಖಾಂತರ ವಿದ್ಯುತ್ ಕಂಬ ತೆರವು ಕಾರ್ಯ ನಡೆಸಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಟಿಪ್ಪರ್ ಜಪ್ತಿ ಮಾಡಿ ಚಾಲಕ ಮಣಿ ವಶಕ್ಕೆ ಪಡೆದಿದ್ದಾರೆ.
ಮಧ್ಯರಾತ್ರಿ 1:30ರ ಸುಮಾರಿಗೆ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮುಖ್ಯರಸ್ತೆಯಲ್ಲೇ ಕಂಬಗಳು ಧರೆಗುರುಳಿದ್ದು ರಸ್ತೆಯ ತುಂಬೆಲ್ಲಾ ಲಾರಿಯಲ್ಲಿದ್ದ ಜಲ್ಲಿ ಹುಡಿ ಬಿದ್ದಿದೆ. ನೆಲಮಂಗಲ ರಿಜಿಸ್ಟ್ರೇಷನ್ ನ ಟಿಪ್ಪರ್ ಸಂಖ್ಯೆ KA 52 B 7301ರಿಂದ ಅವಘಡ ಸಂಭವಿಸಿದೆ.
Poll (Public Option)

Post a comment
Log in to write reviews