
ಚಾಮರಾಜನಗರ: ಮನೆ ನಿರ್ಮಿಸಲು ಸೋಲಿಗ ಜನಾಂಗದ ನಿವಾಸಿಗಳಿಂದ ಲಂಚ ಕೇಳಿದ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಈದೀಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಆದಿವಾಸಿ ಕುಟುಂಬಗಳಿಗೆ ಸರ್ಕಾರದಿಂದ 18 ಮನೆಗಳು ಮಂಜೂರಾಗಿತ್ತು. ಮನೆಯ ಅಡಿಪಾಯ ಕೆಲಸ ಪೂರ್ಣಗೊಂಡ ನಂತರ ಸರ್ಕಾರದಿಂದ ಮೊದಲ ಕಂತು ಹಣ ಬಿಡುಗಡೆಯಾಗಿದೆ. ಆದರೆ ಮನೆ ನಿರ್ಮಾಣ ಮಾಡುತ್ತಿರುವ ಆದಿವಾಸಿಗಳಿಗೆ, ನೀವು ಮನೆಯ ಗೋಡೆ ಕಟ್ಟುವಂತಿಲ್ಲ. ನಾವು ಕಾಮಗಾರಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಭೋಜಪ್ಪ ಹೇಳಿದ್ದರು. ನಿವಾಸಿಗಳೆಲ್ಲರೂ ಮನವಿ ಮಾಡಿದಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18 ಸಾವಿರ ರೂ ಕೊಟ್ಟರೆ ಮಾತ್ರ ಅವಕಾಶ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮುರುಗೇಶ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು ಎನ್ನಲಾಗಿದೆ.
Poll (Public Option)

Post a comment
Log in to write reviews