
ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಡಾ.ಶಾಂತ್ ಎ.ತಿಮ್ಮಯ್ಯ ಅವರನ್ನುಸರ್ಕಾರ ವಜಾಗೊಳಿಸಿದೆ.
ಸಾರ್ವಜನಿಕರ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಲ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಅಧಿನಿಯಮದ ಅಡಿಯಲ್ಲಿ ಮಂಡಳಿಯ ಸದಸ್ಯ ಸ್ಥಾನ ದಿಂದಲೂ ವಜಾಗೊಳಿಸಲಾಗಿದೆ ಎಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಡಾ.ಶಾಂತ್ ಅವರು ಜಲ ಅಧಿನಿಯಮದ ಉಪಬಂಧಗಳನ್ನು ನೆರವೇರಿಸಲು ಪೂರ್ವಕವಾಗಿ ಉದ್ದೇಶ ನಿರಾಕರಿಸಿ, ಅಧಿಕಾರ ದುರುಪಯೋಗಪಡಿಸಿ ಕೊಂಡಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಮಂಡಳಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಮಂಜೂರಾತಿಯಲ್ಲಿ ಸಾರ್ವಜನಿಕ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಹುದ್ದೆಯಲ್ಲಿ ಮುಂದುವರಿಯಲು ಸಾರ್ವಜನಿಕ ಹಿತಾಸಕ್ತಿಗೆ ಹಾಗೂ ಪರಿಸರ ಸಂರಕ್ಷಣೆಯ ಮೂಲ ಉದ್ದೇಶಗಳಿಗೆ ಮಾರಕವಾಗಿರುವುದರಿಂದ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತನಿಖೆಯಲ್ಲಿ ಅಕ್ರಮ ಪತ್ತೆಯಾಗಿದ್ದು, ವಾರ್ತಾ ಮತ್ತು ಪ್ರಚಾರ ಇಲಾಖೆಯನ್ನು ಕಡೆಗಣಿಸಿ ಖಾಸಗಿ ಜಾಹಿರಾತು ಸಂಸ್ಥೆಗಳಿಗೆ ಕಾರ್ಯದೇಶ ನೀಡಿ ಹಣ ಮತ್ತುಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ದಾಖಲಾಗಿದ್ದ ದೂರುಗಳ ಸಂಬಂಧ ಪ್ರಕರಣದ ತನಿಖೆ ನಡೆಸಲು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿಯನ್ನು ಸರ್ಕಾರ ತನಿಖಾಧಿಕಾರಿಯನ್ನಾಗಿ ನೇಮಿಸಿತ್ತು. ಶಾಂತ್ ತಿಮ್ಮಯ್ಯ ಅಕ್ರಮ ನಡೆಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.
Poll (Public Option)

Post a comment
Log in to write reviews