
ಬೆಂಗಳೂರು: ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ತಮ್ಮ 73 ನೇ ಹುಟ್ಟು ಹಬ್ಬವನ್ನು ಇಂದು ತುಮಕೂರಿನಲ್ಲಿ ಆಚರಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಬೆಂಗಳೂರಿನ ಸದಶಿವನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ(DR. G Parameshwara) ಅವರ ಸರ್ಕಾರಿ ನಿವಾಸದಲ್ಲಿ ಅನಾಹುತವೊಂದು ತಪ್ಪಿದೆ., ಡಾ.ಪರಮೇಶ್ವರ ಅವರ ಹುಟ್ಟುಹಬ್ಬ ಆಚರಣೆ ವೇಳೆ ಮಳೆ, ಗಾಳಿಗೆ ಬುಡ ಸಮೇತ ತೆಂಗಿನಮರ ಟೆಂಟ್ ಮೇಲೆ ಉರುಳಿದೆ. ಡಾ.ಪರಮೇಶ್ವರ್ ಸ್ವಾಗತಕ್ಕಾಗಿ ನೂರಾರು ಅಭಿಮಾನಿಗಳು ಕಾದುಕೊಂಡಿದ್ದರು. ಈ ವೇಳೆ ಜರ್ಮನ್ ಟೆಂಟ್ ಮೇಲೆ ತೆಂಗಿನ ಮರ ಬಿದ್ದಿದ್ದು, ಅಭಿಮಾನಿಗಳು, ಪೊಲೀಸ್ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾಗಿರು ಘಟನೆ ನಡೆದಿದೆ.
Poll (Public Option)

Post a comment
Log in to write reviews