
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಪ್ರಜ್ವಲ್ ಪತ್ತೆಯಾಗಿಲ್ಲ. ಆರೋಪಿ ಪ್ರಜ್ವಲ್ ವಿದೇಶದಿಂದ ಬರೋದ್ಯಾವಾಗ..? ಸಂಸದ ಪ್ರಜ್ವಲ್ ರೇವಣ್ಣ ಬಂಧನ ಯಾವಾಗ..? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ.
SIT ಅಧಿಕಾರಿಗಳಿಗೆ ಈ ಪೆನ್‌ಡ್ರೈವ್ ಪ್ರಕರಣ ಸವಾಲಾಗಿದೆ. ಎಚ್‌ಡಿ ಕುಮಾರ ಸ್ವಾಮಿ ಹಾಗೂ ಜೆಡಿಎಸ್ ವರಿಷ್ಟ ಎಚ್‌ಡಿ ದೇವೆಗೌಡರ ಮಾತಿಗೂ ಪ್ರಜ್ವಲ್ ರೇವಣ್ಣ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ. ಇದು SITಗೆ ಸವಾಲಾಗಿದೆ. ಪ್ರಜ್ವಲ್ ವಿಚಾರದಲ್ಲಿ ಮೈತ್ರಿ ಪಕ್ಷಗಳ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಸಮರ ಹೆಚ್ಚಾಗಿದೆ.ಪ್ರಜ್ವಲ್ ಶರಣಾಗದೆ ಅಥವಾ ಬಂಧನವಾಗದೆ ಪೆನ್ ಡ್ರೈವ್ ಕೇಸ್‌ಗೆ ತಾರ್ಖಿಕ ಅಂತ್ಯ ಸಿಗುವ ಸಾಧ್ಯತೆ ಇಲ್ಲ. ಅದ ಕಾರಣ ಕೇಸು ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಒಂದು ಮೂಲದ ಪ್ರಕಾರ ಪ್ರಜ್ವಲ್ ಭಾರತಕ್ಕೆ ಲೊಕಸಭಾ ಚುಣಾವಣೆ ಫಲಿತಾಂಶದ ನಂತರ ಬರುತ್ತಾನೆ ಎಂದಾದರು. ಇನ್ನೊಂದು ಮೂಲದ ಪ್ರಕಾರ ಪ್ರಜ್ವಲ ದೇಶಕ್ಕೆವಾಪಾಸಗುವುದು ಅನುಮಾನ ಎನ್ನಲಾಗುತ್ತಿದೆ. ಪೆನ್ ಡ್ರೈವ್ ಪ್ರಕರಣ ಮುಗಿಯದ ಹೊರತು ಭಾರತಕ್ಕೆ ಬರದೆ ಅಜ್ಞಾತ ಸ್ಥಳದಲ್ಲೆ ಇರುತ್ತಾರೆ ಎನ್ನಲಾಗಿದೆ.
Poll (Public Option)

Post a comment
Log in to write reviews