
‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗತಾನೇ ಆರಂಭ ಆಗಿದೆ. ಈ ಶೋ ಒಂದು ವಾರ ಪೂರ್ಣಗೊಳಿಸಿದೆ. ಈ ಬೆನ್ನಲ್ಲೆ ‘ಬಿಗ್ ಬಾಸ್ ಹಿಂದಿ ಸೀಸನ್ 18′ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗುತ್ತಿದೆ. ನಟ ಸಲ್ಮಾನ್ ಖಾನ್ ಅವರು ನಡೆಸಿಕೊಡೋ ‘ಬಿಗ್ ಬಾಸ್ 18′ ಶೋ ಭಾನುವಾರ (ಅಕ್ಟೋಬರ್ 6) ಆರಂಭವಾಗಿದೆ. ಈ ಶೋಗೆ ಹಲವು ಸ್ಪರ್ಧಿಗಳು ಬಂದಿದ್ದಾರೆ. ಈಗ ದೊಡ್ಮನಗೆ ಕತ್ತೆ ಎಂಟ್ರಿ ಕೊಟ್ಟಿದ್ದು ಎಲ್ಲರ ಮನ ಗೆದ್ದಿದೆ.
ಕಲರ್ಸ್ ಚಾನೆಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕತ್ತೆಯನ್ನು ನೋಡಿ ಅಭಿಮಾನಿಗಳು ಕೂಡ ಬೆರಗಾಗಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಕತ್ತೆಯನ್ನು ನೋಡಿದ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ‘ಬಿಗ್ ಬಾಸ್ 18’ನಲ್ಲಿ ಇದರ ಪಾತ್ರವೇನು? ಈ ಪ್ರಶ್ನೆಯನ್ನು ಅಭಿಮಾನಿಗಳು ಕೂಡ ಎತ್ತುತ್ತಿದ್ದಾರೆ.
‘ಬಿಗ್ ಬಾಸ್ನ ಕೊನೆಯ ಸ್ಪರ್ಧಿಯಾಗಿ ಕತ್ತೆಯ ಆಗಮನ ಆಗಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕತ್ತೆಗೆ ಗಧರಾಜ್ ಎಂದು ಹೆಸರು ಕೊಡಲಾಗಿದೆ. ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಕತ್ತೆ ವಕೀಲ ಗುಣರತ್ನ ಸದಾವರ್ತನ್ ಅವರದ್ದು ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗುಣರತ್ನ ಸದಾವರ್ತನ್ ಅವರ ಜೊತೆಯಲ್ಲಿ ಅವರ ಕತ್ತೆಯೂ ಇರುತ್ತದೆ ಎನ್ನಲಾಗಿದೆ.
ಗುಣರತ್ನ ಸದಾವರ್ತನ್ ವೃತ್ತಿಯಲ್ಲಿ ವಕೀಲರು. ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ‘ಹಮ್ ಆತೇ ಹೈ ಡಾಕು ಕಿ ಖಂಡನ್ ಸೇ’ (‘ನಾವು ದರೋಡೆಕೋರರ ಕುಟುಂಬದಿಂದ ಬಂದವರು) ಎಂದು ಎಂಟ್ರಿ ನೀಡಿದ್ದಾರೆ.
Poll (Public Option)

Post a comment
Log in to write reviews