
ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕಳೆದ 31 ದಿನದಲ್ಲಿ 3.38 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಕರ್ನಾಟಕ, ಆಂಧ್ರಪ್ರದೇಶದ ಶಕ್ತಿ ಯೋಜನೆ ಪ್ರಭಾವದಿಂದ ಮಂತ್ರಾಲಯದ ರಾಯರ ಮಠಕ್ಕೆ ಹೆಚ್ಚಿನ ಕಾಣಿಕೆ ಹರಿದು ಬಂದಿದೆ. ದಸರಾ ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಒಟ್ಟು ಕಾಣಿಕೆಯಲ್ಲಿ 3.30 ಕೋಟಿ ರೂ. ನೋಟುಗಳು, 7.44 ಲಕ್ಷ ರೂ ನಾಣ್ಯಗಳು, 136 ಗ್ರಾಂ ಚಿನ್ನ, 1180 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಈ ಸಂದರ್ಭದಲ್ಲಿ ಮಠದ ನೂರಾರು ಜನ ಸಿಬ್ಬಂದಿಗಳು, ಕರ ಸೇವಕರು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು
Poll (Public Option)

Post a comment
Log in to write reviews