ವಾಷಿಂಗ್ಟನ್: ಲೈಂಗಿಕ ಸಂಬಂಧಿತ ವಿಚಾರದಲ್ಲಿ ಪ್ರಕರಣ ಹೊರಬರದಂತೆ ರಹಸ್ಯವಾಗಿ ಹಣ ನೀಡಿರುವ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ.
ಡೊನಾಲ್ಡ್ ಟ್ರಂಪ್ 2006ರಲ್ಲಿ ಸ್ಟೋರ್ಮಿಡೇನಿಯಲ್ಸ್ ಜತೆ ಲೈಂಗಿಕ ಸಂಬಂಧ ಹೊಂದಿದ್ದರು. 2016ರ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದಾದ ನಂತರ ಈ ಘಟನೆ ಬಹಿರಂಗಗೊಳಿಸುವುದಾಗಿ ಸಂತ್ರಸ್ತೆಯಾಗಿದ್ದ ಸ್ಟೋರ್ಮಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಅವರಿಗೆ ರಹಸ್ಯವಾಗಿ ಟ್ರಂಪ್ ಹಣ ನೀಡಿದ್ದರು ಎಂಬ ಆರೋಪವಿತ್ತು.
ಈ ಆರೋಪ ಮರೆ ಮಾಚಲು ಟ್ರಂಪ್ ಸುಳ್ಳು ದಾಖಲೆ ಸೃಷ್ಟಿಸಿದ್ದರು. ಆದರೆ ಈಗ ನ್ಯಾಯಾಲಯದಲ್ಲಿ ತೀರ್ಪು ಹೊರ ಬಂದಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಶ್ ಮನಿ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. 2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಪೋರ್ನ್ ಸ್ಟಾರ್ ಸ್ಟೋರ್ಮಿ ಡೇನಿಯಲ್ಸ್ ಜೊತೆ ಸಂಬಂಧವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ. ಮತ್ತು ಅದನ್ನು ಮರೆಮಾಡಲು ಅವರು ಹಣವನ್ನು ಸ್ಟೋರ್ಮಿಗೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ದಾಖಲೆಗಳನ್ನು ತಿದ್ದಿದ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಅವರು ಸ್ಟೋರ್ಮಿ ಡೇನಿಯಲ್ಸ್ ಜತೆಗಿನ ಸಂಬಂಧವನ್ನು ಕೂಡ ನಿರಾಕರಿಸಿದ್ದಾರೆ. ನ್ಯಾ. ಜುವಾನ್ ಮಾರ್ಚೆನ್ ಜುಲೈ 11ರಂದು ಶಿಕ್ಷೆ ಪ್ರಕಟಿಸಲಿದ್ದಾರೆ. ಜುಲೈ 15ರಂದು ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗಲಿರುವ ಸಮಯದಲ್ಲಿ ಟ್ರಂಪ್ ವಿರುದ್ಧ ನಿರ್ಧಾರ ಪ್ರಕಟವಾಗುತ್ತದೆ. ಇದರಲ್ಲಿ ಟ್ರಂಪ್ ಹೆಸರನ್ನು ಪಕ್ಷವು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸುತ್ತದೆ. ಈ ಪ್ರಕರಣದಲ್ಲಿ ಟ್ರಂಪ್ಗೆ ಗರಿಷ್ಠ ನಾಲ್ಕು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು.
ನಾನೊಬ್ಬ ಮುಗ್ಧ ವ್ಯಕ್ತಿ, ನಾನು ಯಾವುದೇ ತಪ್ಪು ಮಾಡಿಲ್ಲ ಹೋರಾಟ ಮಾಡುತ್ತೇನೆ, ಕೊನೆಯವರೆಗೂ ಹೋರಾಡಿ ಗೆಲ್ಲುತ್ತೇನೆ. ನವೆಂಬರ್ 5 ರಂದು ದೇಶದ ಜನತೆ ನಿಜವಾದ ನಿರ್ಧಾರ ತೆಗೆದುಕೊಳ್ಳಲಿ ಮತ್ತು ನಾನು ಜೈಲಿನಲ್ಲಿದ್ದರೂ ಕೂಡ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರಮಾಣವಚನ ಸ್ವೀಕಾರ ನಿಲ್ಲಿಸುವುದಿಲ್ಲವೆಂದು ಟ್ರಂಪ್ ಕೋರ್ಟ್ ಹೊರಗೆ ಹೇಳಿದ್ದಾರೆ.
Post a comment
Log in to write reviews