
ಬೆಂಗಳೂರು : ಮೃತ ಹೆಡ್ ಕಾನ್ಸ್ಟೇಬಲ್ ಒಬ್ಬರ ಗುರುತಿನ ಚೀಟಿ ಬಳಸಿಕೊಂಡು ಸಂಚಾರ ಪೊಲೀಸರ ರೀತಿಯಲ್ಲಿ ಸಂದೇಶ ಕಳುಹಿಸಿ ಹಣ ವಸೂಲಿ ಮಾಡುತ್ತಿದ್ದ ಕೋಲ್ಕತ್ತಾ ಮೂಲದ ಮೂವರು ವಂಚಕರನ್ನು, ನಗರದ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಂಜನ್‌ಕುಮಾರ್ ಪೋಬಿ೯, ಇಸ್ಮಾಯಿಲ್ ಅಲಿ ಮತ್ತು ಸುಭಿರ್ ಮಲ್ಲಿಕ್, ಎಂಬುವರು ಬಂಧಿತ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಆರೋಪಿಗಳಿಂದ ಮೂರು ಮೊಬೈಲ್ ಗಳು ಮತ್ತು ಬ್ಯಾಂಕ್ ಖಾತೆಗಳ ಜಪ್ತಿ ಮಾಡಲಾಗಿದೆ.
ರಂಜನ್ ಕೋಲ್ಕತ್ತಾದಲ್ಲಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಇಸ್ಮಾಯಿಲ್ ಅಲಿ ಸೈಬರ್ ಕೆಫೆ ನಡೆಸುತ್ತಿದ್ದು, ರೈಲು, ಬಸ್, ವಿಮಾನ ಟೆಕೆಟ್ ಬುಕ್ ಮಾಡುತ್ತಿದ್ದ. ಸುಭಿರ್ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ಈ ಮೂವರೂ ಸೇರಿ ಮೃತ ಹೆಡ್ ಕಾನ್ಸ್ಟೇಬಲ್ ಭಕ್ತರಾಮ್ ಎಂಬುವರ ಗುರುತಿನ ಚೀಟಿ ಬಳಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು. ಇದ್ದನ್ನು ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾನ್ಸ್ಟೇಬಲ್ ಭಕ್ತರಾಮ್ ನಗರ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2020ರಲ್ಲಿ ಅಪಘಾತ ಒಂದರಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮಾಧ್ಯಮಗಳು ಆತನ ಗುರುತಿನ ಚೀಟಿ ಬಳಸಿ ಸುದ್ದಿ ಪ್ರಕಟಿಸಿದ್ದವು. ಇದನ್ನು ತಿಳಿದ ರಂಜನ್ ಕುಮಾರ್, ಗೂಗಲ್‌ನಲ್ಲಿ ಬೆಂಗಳೂರು ಪೊಲೀಸ್ ಐಡಿ ಎಂದು ಶೋಧಿಸಿದಾಗ, ಮೃತ ಭಕ್ತರಾಮ್ ಗುರುತಿನ ಚೀಟಿ ಸಿಕ್ಕಿತ್ತು. ಆಗ ಆತನ ಫೋಟೋ ಬಳಸಿಕೊಂಡು, ಹೆಸರನ್ನು ಕುಮಾರಸ್ವಾಮಿ ಎಂದು ಬದಲಾಯಿಸಿ ಕೊಂಡು ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews