2024-09-19 05:02:24

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮುಖದ ಮೇಲೆನ ಕಪ್ಪು ಕಲೆಗಳಿಂದ ಮುಖದ ಆಕರ್ಷಣೆ ಕುಂದುವುದೇ? ಹಾಗಾದರೆ ಈ ಟಿಪ್ಸ್‌ ಬಳಸಿ

 

ಯುವಕ ಆಗಿರಲಿ ಯುವತಿ ಆಗಿರಲಿ ಅವರು ಸುಂದರವಾಗಿ ಕಾಣಿಸಬೇಕು ಎಂದು ಯಾವಾಗಲು ಬಯಸುತ್ತಾರೆದರೆ ಮುಖದ ಮೇಲೆ ಬಹುಬೇಗ ಕಲೆಗಳು ಕಾಣಿಸಿಕೊಳ್ಳುತ್ತೆ. ನಿರಂತರವಾಗಿ ಧೂಳಿನಲ್ಲಿ ಓಡಾಟ ನಡೆಸುವುದು, ಅತಿಯಾದ ಜಿಡ್ಡಿನ ತ್ವಚೆ ಹೊಂದುವುದರಿಂದ ಹಾಗೂ ಆನುವಂಶಿಕ ಸಮಸ್ಯೆಯಿಂದಾಗಿ ಕೆಲವು ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು.
ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು ಅಂದರೆ ಸುಲಭದ ವಿಚಾರವಲ್ಲ. ಏಕೆಂದರೆ ಸುಲಭವಾಗಿ ಮುಖವನ್ನು ಬಿಳಿಯಾಗಿ ಹೊಳಪಾಗಿ ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ಆದರೆ ನೈಸರ್ಗಿಕ  ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಯಾವ ರೀತಿಯ ಸಿದ್ಧತೆ ಬೇಕು. ಇದರ ಸುಲಭದ ಟಿಪ್ಸ್ ಏನು? ಮುಖ ಹೊಳೆಯುವಂತೆ ಮಾಡಲು ಇರುವ ಮನೆ ಮದ್ದು ಏನಿರಬಹುದು ಎಂಬುದನ್ನು ನಾವಿಂದು ತಿಳಿಯೋಣ.

ಮನೆಯಲ್ಲೇ ಮಾಡಿ ಫೇಸ್ ಪ್ಯಾಕ್
ಮೊದಲು ಬೌಲ್‌ನಲ್ಲಿ 2 ಸ್ಪೂನ್ ಮೊಸರು, ಒಂದು ಚಿಟಿಕೆ ಉಪ್ಪು, ಅರ್ಧ ಸ್ಪೂನ್ ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಕಪ್ಪಗಿರುವ ಕಲೆಗಳ ಮೇಲೆ ಹಚ್ಚಬೇಕು. ಮುಖ, ಕುತ್ತಿಗೆ ಭಾಗ, ಕೈ, ಕಾಲು ಹೀಗೆ ಕಪ್ಪಾಗಿರುವ ಭಾಗಕ್ಕೆ ಈ ಫೇಸ್ ಪ್ಯಾಕ್ ಹಚ್ಚಿ ಬೆಳಗ್ಗೆ ತೊಳೆಯಬೇಕು. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡಿದರೆ ಖಂಡಿತ ಸುಟ್ಟ ಕಲೆಗಳು ಮಾಯವಾಗುತ್ತವೆ.


ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್

ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಮೊಸರು ಹಾಕಿಕೊಳ್ಳಿ, ಬಳಿಕ ಇದಕ್ಕೆ ರೋಸ್ ವಾಟರ್, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಲಾಗುವ ಪ್ಯಾಕ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಲಿದೆ.
 

ಜೇನು - ಮೊಟ್ಟೆಯ ಫೇಸ್ ಮಾಸ್ಕ್

 ಜೇನು ಹಾಗೂ ಮೊಟ್ಟೆಯ ಬಿಳಿ ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ. ನಂತರ 20 ನಿಮಿಷ ಬಿಟ್ಟ ಮೇಲೆ ಮುಖ ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.

 ನಿಂಬು ಮತ್ತು ಸಕ್ಕರೆ

 ನಿಂಬೆ ರಸ ಹಾಗೂ ಸಕ್ಕರೆಯ ಸಂಯೋಗವು ಚರ್ಮದಲ್ಲಿ ಇರುವ ನಿರ್ಜೀವ ಕೋಶಗಳನ್ನು ತೆಗೆಯಲು ಉತ್ತಮ ಪರಿಹಾರ. ಇದರ ಇನ್ನೊಂದು ಉಪಯೋಗವೆಂದರೆ ಚರ್ಮದಲ್ಲಿ ಇರುವ ಕಪ್ಪು ಕಲೆ ಅಥವಾ ಚುಕ್ಕೆಯನ್ನು ತೆಗೆಯಲು ಸಹಾಯ ಮಾಡುವುದು. ಈ ಆರೈಕೆಯ ಪ್ರಾರಂಭಿಸುವಾಗ ಹರಳು ಹರಳಾಗಿರುವ ಸಕ್ಕರೆಯನ್ನು ಉಪಯೋಗಿಸಬೇಕು

 

ಓಟ್ಸ್ ಮತ್ತು ಜೇನುತುಪ್ಪ

ಓಟ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ. ಓಟ್ಸ್‌ನ ಪುಡಿಗೆ ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಮಿಶ್ರಗೊಳಿಸಿ. ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5 ನಿಮಿಷಗಳ ಕಾಲ ವೃತ್ತಕಾರದಲ್ಲಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಮೃದು ನೀರಿನಲ್ಲಿ ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಕ್ಕೆ ವಾರಕ್ಕೊಮ್ಮೆ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುವುದು ಖಚಿತ

ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಮೊಸರು ಹಾಕಿಕೊಳ್ಳಿ, ಬಳಿಕ ಇದಕ್ಕೆ ರೋಸ್ ವಾಟರ್, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಲಾಗುವ ಪ್ಯಾಕ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಲಿದೆ.

Post a comment

No Reviews