
ಶಿಮ್ಲಾ: ಹಿಮಾಚಲ ಪ್ರದೇಶ ಉಪ ಚುನಾವಣೆಯಲ್ಲಿ ಮಧ್ಯದ ಬೆರಳಿಗೆ ಶಾಯಿ ಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ. ಹಿಮಾಚಲ ಪ್ರದೇಶದಲ್ಲಿ ಜೂನ್ ತಿಂಗಳ 10 ರಂದು ಡೆಹ್ರಾ, ಹಮೀರ್‌ಪುರ್ ಹಾಗೂ ನಾಲಾಗಢ್ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಆದ್ರೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲೋಕಸಭೆ ಚುನಾವಣೆ ಮುಗಿದಿದ್ದು, ಅಂದು ಮತದಾರರ ತೊರು ಬೆರಳಿಗೆ ಹಾಕಿದ ಶಾಯಿ ಇನ್ನೂ ಮಾಸಿರುವುದಿಲ್ಲ. ಆದ ಕಾರಣ ತೋರು ಬೆರಳಿನ ಬದಲು ಮಧ್ಯದ ಬೆರಳಿಗೆ ಶಾಯಿ ಹಾಕಲು ನಿರ್ಧರಿಸಿರುವುದಾಗಿ ಹಿಮಾಚಲ ಪ್ರದೇಶ ಮುಖ್ಯ ಚುನಾವಣಾಧಿಕಾರಿ ಮನೀಷ್ ಗರ್ಗ್ ತಿಳಿಸಿದ್ದಾರೆ.
ಯಾವುದೇ ಚುನಾವಣೆ ನಡೆದ ನಂತರ ಎರಡು ತಿಂಗಳ ಅವಧಿಯಲ್ಲಿ ಮತ್ತೂಂದು ಚುನಾವಣೆ ನಿಗದಿಯಾದರೆ, ಆಗ ಮತದಾರರಿಗೆ ಮಧ್ಯದ ಬೆರಳಿನ ಮೇಲೆ ಶಾಯಿ ಹಾಕಲಾಗುತ್ತದೆ ಎಂದು ಈ ಬಗ್ಗೆ ಸ್ಪಷ್ಠನೆಯನ್ನೂ ನೀಡಿದ್ದಾರೆ
Poll (Public Option)

Post a comment
Log in to write reviews