2024-09-19 09:02:38

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾರು ಗೊತ್ತಾ..?

ಇತ್ತೀಚೆಗೆ ಕನ್ನಡ ಚಿತ್ರರಂಗದ ಮಾರ್ಕೆಟ್ ದೊಡ್ಡದಾಗಿ ಬೆಳೆದುಕೊಂಡಿದೆ. ಕನ್ನಡದ ಪ್ರಮುಖ ನಟರು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ಮಾಡಿ ಎಲ್ಲೆಡೆ ಯಶಸನ್ನು  ಗಳಿಸುತ್ತಿದ್ದಾರೆ. ಹಾಗಾಗಿ ಅವರ ಸ್ಟಾರ್ಡಮ್ ಗೆ ತಕ್ಕ ಹಾಗೆ ಅವರ ಸಂಭಾವನೆ ಇರುತ್ತದೆ. ಇದರ ನಡುವೆ ಆ ನಟರ ಲೈಫ್ ಸ್ಟೈಲ್ ನೋಡಿ ಇವರ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಅವರ ಅಭಿಮಾನಿ ವಲಯದಲ್ಲಿಇದ್ದೇ ಇರುತ್ತದೆ. ಇದರಿಂದಾಗಿ ಇಂದು ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಮತ್ತು ಅವರು ಪಡೆಯುವ ಸಂಭಾವನೆ ಎಷ್ಟೆಂದು ತಿಳಿದುಕೊಳ್ಳೋಣ ಬನ್ನಿ.

1) ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್ ಚಿತ್ರಗಳ ಮೂಲಕ ದೇಶ ವಿದೇಶದಲ್ಲಿ ಹೆಸರುವಾಸಿಯಾದ ಯಶ್ ಸದ್ಯ ಒಂದು ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.  ಈಗ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

2) ದರ್ಶನ್

ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್ ಸಹ ಒಬ್ಬರು.  ದರ್ಶನ್ ಒಂದು ಸಿನಿಮಾಗೆ ಬರೋಬ್ಬರಿ 20, ರಿಂದ 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ದರ್ಶನ್ ಈಗ ಡೆವಿಲ್ ದ ಹೀರೋ ಚಿತ್ರವನ್ನು ಮಾಡುತ್ತಿದ್ದಾರೆ.

3) ಸುದೀಪ್

ಅಭಿಮಾನಿಗಳ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದು ಸಿನಿಮಾಗೆ ಬರೋಬ್ಬರಿ 10 ರಿಂದ 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸುದೀಪ್ ಈಗ  ಮ್ಯಾಕ್ಸ್ ಸಿನಿಮಾ ಮಾಡುತ್ತಿದ್ದಾರೆ.

4) ರಿಷಬ್ ಶೆಟ್ಟಿ.

ಕಾಂತಾರ ಸಿನಿಮಾದ ಮೂಲಕ  ದೇಶ ವಿದೇಶದೆಲ್ಲೆಡೆ ಹೆಸರುವಾಸಿಯಾದ ರಿಷಬ್ ಶೆಟ್ಟಿ ಒಂದು ಸಿನಿಮಾಗೆ 13 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾಗೆ ಈಗ ವಿಶ್ವವೇ ಕಾಯುತ್ತಿದೆ.

ಇವರು ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ನಟರಾಗಿದ್ದು, ಕನ್ನಡ ಚಿತ್ರರಂಗವನ್ನು ಉತ್ತಮವಾಗಿ ನಡೆಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.

Post a comment

No Reviews