'ದೇವರ'ದಲ್ಲಿ ಕನ್ನಡದ ಹುಡುಗನ ಹವಾ, ಹೇಗಿದೆ ಗೊತ್ತಾ? KGFನಲ್ಲೂ ಖದರ್, ‘ದೇವರ’ದಲ್ಲೂ ಸೂಪರ್..!

ಜೂನಿಯರ್ ಎನ್ಟಿಆರ್ ಅಭಿನಯದ ದೇವರ ಸಿನಿಮಾ ಈದೀಗ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ, ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ. 2 ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿರುವ NTR ಒಳ್ಳೆಯ ಕಥೆಯೊಂದಿಗೆ ಅಭಿಮಾನಿಗಳೆದುರು ಎಂಟ್ರಿ ಕೊಟ್ಟಿದ್ದಾರೆ.
ಕೊರಟಲಾ ಶಿವ ನಿರ್ದೇಶನದ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಸೇರಿ ಇತರೆ ಕಲಾವಿದರು ನಟಿಸಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಅಭಿನಯ ಮಾಡಿದ್ದ ಕನ್ನಡ ಯುವ ನಟ ತಾರಕ್ ಪೊನ್ನಪ್ಪ ದೇವರದಲ್ಲೂ ಖಡಕ್ ಪಾತ್ರದಲ್ಲಿ ಕಾಣಿಸಿದ್ದಾರೆ.
ಜೂನಿಯರ್ ಎನ್ಟಿಆರ್ ನಟನೆಯ ದೇವರ ಸಿನಿಮಾಗೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ. ಕನ್ನಡಿಗರಿಗೆ ಖುಷಿಯ ವಿಚಾರ ಏನಂದ್ರೆ ಕೆಜಿಎಫ್ ಸಿನಿಮಾದಲ್ಲಿ ದಯಾ ಪಾತ್ರದಿಂದ ಗಮನ ಸೆಳೆದಿದ್ದ ತಾರಕ್ ಪೊನ್ನಪ್ಪ, ಇಲ್ಲಿಯೂ ಪ್ರಮುಖ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟನೆ ಮಾಡಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಮಗನಾಗಿ, ಜೂನಿಯರ್ ಎನ್ಟಿಆರ್ ವಿರುದ್ಧ ನಿಂತಿದ್ದಾರೆ. ತಾರಕ್ ಪಾತ್ರಕ್ಕೆ ಉತ್ತಮ ಪ್ರಶಂಸೆ ಬಂದಿದ್ದು, ದೇವರ ಮಾತ್ರವಲ್ಲದೇ ಪುಷ್ಪ 2 ಸಿನಿಮಾದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ತಾರಕ್ ಪೊನ್ನಪ್ಪ ಅಭಿನಯ ಮಾಡುತ್ತಿದ್ದಾರೆ.
ದೇವರ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ಗೆ ಜೋಡಿಯಾಗಿ ಬಾಲಿವುಡ್ನ ಜಾನ್ವಿ ಕಪೂರ್ ಅಭಿನಯಿಸಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿಖಾನ್ ವಿಲನ್ ರೋಲ್ನಲ್ಲಿ ನಟಿಸಿದ್ದಾರೆ. ಶ್ರುತಿ ಮರಾಠೆ, ಶ್ರೀಕಾಂತ್, ನರೈನ್, ಅಜಯ್ ಸೇರಿದಂತೆ ಇತರರು ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದು ಜೂನಿಯರ್ ಎನ್ಟಿಆರ್ ಸಹೋದರ ಕಲ್ಯಾಣ್ ರಾಮ್ ಬಜೆಟ್ ಹಾಕಿದ್ದಾರೆ.
Poll (Public Option)

Post a comment
Log in to write reviews