
ತುಟಿ ಕಪ್ಪಾಗಿದೆಯಾ? ಕೆಂಪಗೆ ಕಾಣಬೇಕೆಂದರೆ ಇಲ್ಲಿದೆ ಮನೆ ಮದ್ದು
ಸೌಂದರ್ಯದ ವಿಷ್ಯಕ್ಕೆ ಬಂದಾಗ, ತ್ವಚೆಯ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆನೇ ಇದಕ್ಕೆ ಒಳ್ಳೆಯ ಉದಾಹರಣೆ ಅಂದ್ರೆ, ತುಟ್ಟಿ ಕಪ್ಪಾಗಿ ಕಾಣುವುದು. ಈ ಸಮಸ್ಯೆಯನ್ನು ಮರೆಮಾಚಲೆಂದೇ ಕೆಲವರು ಗಾಢವಾದ ಲಿಪ್ ಸ್ಟಿಕ್ ಬಳಸುತ್ತಾರೆ. ಆದರೆ ಯಾವಾಗಲೂ ಈ ರೀತಿ ಮಾಡಲು ಹೋದರೆ, ಕೊನೆಗೆ ಇನ್ನಿಲ್ಲದ ಸಮಸ್ಯೆ ಕೂಡ ಬರಬಹುದು! ಯಾಕೆಂದರೆ ಈ ತುಟಿಯ ಮೇಲಿನ ಚರ್ಮವು, ನಮ್ಮ ದೇಹದ ಇತರ ಭಾಗದ ತ್ವಚೆಗೆ ಹೋಳಿಸಿದರೆ, ತಿಂಬಾನೇ ಸೂಕ್ಷ್ಮವಾದದ್ದು. ನಿಮಗೂ ಈ ಸಮಸ್ಯೆ ಇದಿಯಾ? ಹಾಗಿದ್ರೆ ಈ ಮನೆಮದ್ದನ್ನ ಬಳಸಿನೋಡಿ.
ನಿಮಗೆಲ್ಲ ಗೊತ್ತಿರುವ ಹಾಗೆ, ಟೊಮೆಟೊ ಹಣ್ಣಿನಲ್ಲಿ ಅಪಾರಪ್ರಮಾಣದ ವಿಟಮಿನ್-ಸಿ ಅಂಶ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿ ಕಂಡುಬರುತ್ತದೆ. ಇವು ಚರ್ಮಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡುತ್ತದೆ
ಅಷ್ಟೇ ಅಲ್ಲದೇ, ಸೂರ್ಯನ ಹಾನಿಕಾರಕ ಕಿರಣಗಳಿಂದ ತುಟಿಗಳನ್ನು ರಕ್ಷಣೆ ಮಾಡುವ ಗುಣ ಕೂಡ ಇವುಗಳಲ್ಲಿ ಕಂಡು ಬರುತ್ತದೆ. ಅರ್ಧ ಟೊಮೊಟೊ ಹಣ್ಣನ್ನು ತೆಗೆದುಕೊಂಡು, ಅದರ ಪೇಸ್ಟ್ ತಯಾರು ಮಾಡಿಕೊಳ್ಳಿ, ಆಮೇಲೆ ಇದೇ ಪೇಸ್ಟ್‌ನ್ನು ತುಟಿಗೆ ಹಚ್ಚಿಕೊಂಡು, ಸುಮಾರು ಹತ್ತು ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತುಟಿಗಳನ್ನು ಶುದ್ಧಗೊಳಿಸಿ ಐಸ್ ಕ್ಯೂಬ್ ನಿಂದ ಸ್ಕ್ರಬ್ ಮಾಡಿಕೊಳ್ಳಿ ಇದರಿಂದ ನಿಮ್ಮ ಕಪ್ಪಾದ ತುಟಿಯ ಬಣ್ಣದ ಕೆಂಪು ಬಣ್ಣಕ್ಕೆ ಕ್ರಮೇಣವಾಗಿ ತಿರುಗುತ್ತದೆ.
Poll (Public Option)

Post a comment
Log in to write reviews