
ಆರ್.ಸಿ.ಬಿ ಯ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಮತ್ತೊಂದೆಡೆ ಮ್ಯಾಚ್ ಎಂಜಾಯ್ ಮಾಡಲು ಬೆಂಗಳೂರಿನ ಪಬ್ ಗಳು ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಆಫರ್ ಗಳನ್ನು ನೀಡಿವೆ. ಜತೆಗೆ ಮ್ಯಾಚ್ ಲೈವ್ ಸ್ಟ್ರೀಮಿಂಗ್ ದೊಡ್ಡ ಸ್ಕ್ರೀನ್‌ಗಳ ವ್ಯವಸ್ಥೆಯನ್ನೂ ಮಾಡಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಪ್ಲೇಆಫ್ (IPL Eliminator) ಪ್ರವೇಶಿಸಿದ್ದು, ಇಂದು ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ ಸೆಣಸಾಡಲಿದೆ. ಸತತ 6 ಸೋಲುಗಳ ನಂತರ ಸತತ 6 ಗೆಲುವು ಕಂಡಿರುವ ಆರ್‌ಸಿಬಿ ತಂಡ ಇದೀಗ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಕೂಡ ಗುರುತಿಸಿಕೊಂಡಿದೆ. ಹೀಗಾಗಿ ಮ್ಯಾಚ್ ಗೆಲ್ಲಲು ಅಭಿಮಾನಿಗಳು ಒಂದು ಕಡೆ ದೇವರ ಮೊರೆ ಹೋದರೆ, ಇನ್ನೊಂದಷ್ಟು ಮಂದಿ ಮ್ಯಾಚ್ ಎಂಜಾಯ್ ಮಾಡಲು ಪಬ್ ಕ್ಲಬ್ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನ ಪಬ್‌ಗಳು ಕೂಡ ಅನೇಕ ಆಫರ್ಗಳನ್ನು ಗ್ರಾಹಕರಿಗೆ ನೀಡಿವೆ. ಪಬ್‌ಗಳು ಕ್ರಿಕೆಟ್ ಅಭಿಮಾನಿಗಳಿಗೆ ಸಖತ್ ಆಫರ್ ನೀಡಿದ್ದು, ಸಿಲಿಕಾನ್ ಸಿಟಿ ಪಬ್‌ಗಳಲ್ಲಿ ಭರ್ಜರಿ ಸಿದ್ಧತೆ ಶುರು ಮಾಡಲಾಗಿದೆ. ಆರ್‌ಸಿಬಿ ಫ್ಲಾಗ್‌ಗಳನ್ನು ಹಾಕಿ ಸಿದ್ಧತೆ ಮಾಡಿದ್ದಾರೆ. ಮ್ಯಾಚ್ ಎಂಜಾಯ್ ಮಾಡಲು ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದ್ದು, ಅಭಿಮಾನಿಗಳಿಗೆ ಮ್ಯಾಚ್ ಲೈವ್ ಸ್ಟ್ರೀಮಿಂಗ್ ನೋಡಲು ವ್ಯವಸ್ಥೆ ಮಾಡಿಕೊಂಡಿವೆ.
ಬಸವನಗುಡಿಯ ಸೋಹೋಪಬ್ ಸೇರಿದಂತೆ ಅನೇಕ ಪಬ್ ಗಳಲ್ಲಿ ಸಿದ್ಧತೆ ಮಾಡಲಾಗಿದ್ದು ಮ್ಯಾಚ್ಗೆ ಕೆಲವು ಡಿಸ್ಕೌಂಟ್ ಕೂಡಾ ನೀಡಿವೆ. 1+1 ಆಫರ್ ಜೊತೆಗೆ 3+1 ಆಫರ್ ನೀಡಿದ್ದು ಎಕ್ಸ್ಕ್ಲೂಸಿವ್ ಆಗಿ ಆರ್ಸಿಬಿ ಅಭಿಮಾನಿಗಳಿಗೆ ಬಿಲ್ ಮೇಲೆ ಶೇ 10ರಷ್ಟು ಡಿಸ್ಕೌಂಟ್ ಕೂಡಾ ನೀಡುವುದಾಗಿ ಘೋಷಣೆ ಮಾಡಿವೆ.ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರಿಸಲಿರುವ ಆರ್‌ಸಿಬಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಿದರೆ, ಸೋಲುವ ತಂಡ ಐಪಿಎಲ್ ನಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
Poll (Public Option)

Post a comment
Log in to write reviews