
ಬೆಂಗಳೂರು: ನಿನ್ನೆ ರಾತ್ರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ಪ್ರತಿ ರಸ್ತೆಗೂ ತೆರಳಿ ರಸ್ತೆ ಗುಂಡಿಗಳನ್ನು ಪರಿಶೀಲನೆ ನಡೆಸುವಾಗ ಮದ್ಯ ಸೇವಿಸಿ ಹೋಗಿದ್ದರು ಎಂದು ಜಾತ್ಯತೀತ ಜನತಾ ದಳ (ಜೆಡಿಎಸ್) ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಜೆಡಿಎಸ್, ಡಿಕೆ ಶಿವಕುಮಾರ್ ಕಾರಿನಿಂದ ಇಳಿಯುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮೊದಲು ಎಣ್ಣೆ ರೌಂಡ್ಸ್, ಆಮೇಲೆ ಸಿಟಿ ರೌಂಡ್ಸ್, ಕೊನೆಗೆ ಗುಂಡಿನ ಗಮ್ಮತ್ತು ಎಂದು ಬರೆದುಕೊಂಡಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಡಿಕೆಶಿಯ ಕಾಲೆಳೆದಿದ್ದಾರೆ.
Poll (Public Option)

Post a comment
Log in to write reviews