
ಬೆಂಗಳೂರು: ಐಟಿ ಹಬ್ ಬೆಳ್ಳಂದೂರು ನಿವಾಸಿಗಳು ನಿತ್ಯ ಟ್ರಾಫಿಕ್ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿದ್ದು, ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ರಕ್ಷಣಾ ಇಲಾಖೆಯಿಂದ 22 ಎಕರೆ ಜಮೀನನ್ನು ಖರೀದಿಸುತ್ತಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಮತ್ತು ಡಿಕೆ ಶಿವಕುಮಾರ್ ವಿಧಾನಸೌಧದಲ್ಲಿ ಇಂದು (ಸೆ.28) ಹಿರಿಯ ಸೇನಾಧಿಕಾರಿ ಸಭೆ ನಡೆಸಿದರು.
ಡಿಕೆ ಶಿವಕುಮಾರ್‌ರವರು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈಗಾಗಲೇ ಜಮೀನು ಖರೀದಿಗೆ ರಕ್ಷಣಾ ಇಲಾಖೆ ಮಂತ್ರಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದು, ಟ್ರಾಫಿಕ್ ಸಮಸ್ಯೆಯ ರಸ್ತೆ ನಿರ್ಮಾಣಕ್ಕೆ 12 ಎಕರೆ ಜಮೀನು ಕೊಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು. ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕರೆದಿದ್ದು, ಹೆಬ್ಬಾಳ್ ಕಡೆಗೂ 10 ಎಕರೆ ಜಾಗ ನೀಡಿ ಅಂತ ಕೇಳಿದ್ದೇನೆ ಎಂದರು.
ಈ ಬಾರಿಯ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಿದ್ದೇವೆ. ಜಿಲ್ಲಾ, ತಾಲೂಕಿನ ಹಾಗೂ ಪಾಲಿಕೆಗಳ ಮಟ್ಟದಲ್ಲಿ ಗಾಂಧಿ ನಡಿಗೆ ಹಮ್ಮಿಕೊಂಡಿದ್ದು, ಮೊದಲ ಹಂತವಾಗಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದೇವೆ ಅದಕ್ಕಾಗಿ ಆ್ಯಪ್ ಸಹ ತಯಾರು ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್‌ರವರು ಹೇಳಿದರು.
Poll (Public Option)

Post a comment
Log in to write reviews