
ಬೆಂಗಳೂರು: ಬೆಂಗಳೂರಿನ ಶಾಂತಿನಗರ ಶಾಸಕ ಎನ್. ಎ ಹ್ಯಾರಿಸ್ ಗೆ ಅನರ್ಹತೆ ಭೀತಿ ಎದುರಾಗಿದೆ. 2023 ರ ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಪರಾಜಿತ ಅಭ್ಯರ್ಥಿ ಕೇಸ್ ದಾಖಲಿಸಿದ್ದರು. ಸದ್ಯ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಅ.8ರೊಳಗೆ ಸೂಕ್ತ ಸಾಕ್ಸ್ಯ ಒದಗಿಸುವಂತೆ ಸೂಚನೆ ಕೊಟ್ಟಿದೆ. ಹ್ಯಾರಿಸ್ ಪ್ರಕರಣದ ಇತ್ಯಾರ್ಥಕ್ಕೆ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈ ಕೋರ್ಟ್ ನಲ್ಲೇ ಇತ್ಯಾರ್ಥ ಮಾಡಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ. ಇದ್ರಿಂದಾಗಿ ನಲಪಾಡ್ ಗೆ ಅನರ್ಹತೆ ಭೀತಿ ಎದುರಾಗಿದೆ. ಇದೇ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿ ಟಾಂಗ್ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿಜೆಪಿ ಚುನಾವಣಾ ಆಯೋಗ ಸೇರಿದಂತೆ ಜನತೆಯ ಕಣ್ಣಿಗೆ ಮಂಕುಬೂದಿ ಎರಚುವುದರಲ್ಲಿ ಕಾಂಗ್ರೆಸ್ಸಿಗರು "ಸಿದ್ದಹಸ್ತ"ರು . ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದು ನಿಜಕ್ಕೂ ಅಪರಾಧ.ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
Poll (Public Option)

Post a comment
Log in to write reviews