
ಬೆಂಗಳೂರು: ಕಾಡಂಚಿನ ವಸತಿ ಪ್ರದೇಶಗಳ ಜನರಿಗೆ ವಿಮಾ ಸೌಲಭ್ಯ ಕಲ್ಪಿಸುವ ಕುರಿತು ಪರಿಶೀಲಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಇಂದು ನಡೆದ ಮಾನವ-ಆನೆ ಸಂಘರ್ಷ ನಿರ್ವಹಣೆ ಅಂತಾರಾಷ್ಟ್ರೀಯ ಸಮಾವೇಶದ ಅಂಗವಾಗಿ ರೈತರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಡಿನಂಚಿನ ಜನರಿಗೆ ಸರ್ಕಾರದ ಸಹಯೋಗದಲ್ಲಿ ವಿಮೆ ಮಾಡಿಸಬೇಕು ಎಂಬ ಸಲಹೆಯ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಆನೆಗಳಿಗೆ ಸಂತಾನ ಹರಣಕ್ಕೆ ಕ್ರಮ ಕೈಗೊಂಡು ಗಜ ಸಂತತಿ ತಗ್ಗಿಸಬೇಕು. ಆನೆ ಕಂದಕ, ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂಬ ಸಲಹೆಗಳಿಗೆ ಸ್ಪಂದಿಸಿದ ಸಚಿವರು ಈಗಾಗಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಿದೆ ಎಂದರು.
ಆನೆಗಳು ನಾಡಿಗೆ ಬಾರದಂತೆ ಕಾಡಿನಲ್ಲೇ ಅವುಗಳಿಗೆ ಕಬ್ಬು, ಹಲಸು ಇತ್ಯಾದಿ ಆಹಾರ ಸಿಗುವಂತೆ ಮಾಡಬೇಕು ಎಂಬ ಸಲಹೆ ಕುರಿತಂತೆ ಪ್ರತಿಕ್ರಿಯಿಸಿ, ಆನೆಗಳಿಗೆ ಸ್ವಾದಿಷ್ಟ ಆಹಾರವನ್ನು ಕಾಡಿನಲ್ಲಿ ಬೆಳೆಸಿ ನೀಡುವುದು ಸೂಕ್ತವಲ್ಲ ಎಂಬ ತಜ್ಞರ ಅಭಿಪ್ರಾಯವಿದೆ. ಈ ಬಗ್ಗೆ ಪರಾಮರ್ಶಿಸಲಾಗುವುದು.
ಜೀವನ- ಜೀವನೋಪಾಯ ಎರಡೂ ಇರಬೇಕು. ನಮ್ಮ ಪೂರ್ವಿಕರು ನೈಸರ್ಗಿಕ ಸಂಪತ್ತನ್ನು ಹಿತಮಿತವಾಗಿ ಬಳಸುತ್ತಿದ್ದರು. ಆದರೆ ಈಗ ನೈಸರ್ಗಿಕ ಸಂಪನ್ಮೂಲದ ಅತಿಯಾದ ಬಳಕೆಯೂ ಅರಣ್ಯ ನಾಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
Poll (Public Option)

Post a comment
Log in to write reviews