
ಮಾಜಿ ಸಚಿವ ಹೆಚ್.ಡಿ. ರೇವಣ್ಣಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣದಲ್ಲಿ ರಾಜಕಾರಣ ಮಾಡಬೇಕು. ಅದನ್ನು ಬಿಟ್ಟು ಹೊಲಸು ರಾಜಕಾರಣದ ಪ್ರಕ್ರಿಯೆ ಏನಿದೆ ಇದು ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದು ಕಿಡಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಪೊಲೀಸರನ್ನ ಬಳಸಿಕೊಂಡು ಕುತಂತ್ರ ಮಾಡಿದೆ. ಸರ್ಕಾರದ ಬಳಿ ಸರಿಯಾದ ಸಾಕ್ಷ್ಯಾಧಾರಗಳಿಲ್ಲ. ಚುನಾವಣೆಯಲ್ಲಿ ಇದನ್ನು ಉಪಯೋಗ ಮಾಡಿಕೊಳ್ಳಬೇಕು. ರೇವಣ್ಣ ಅವರನ್ನು ಬಂಧನ ಮಾಡಿದ್ರೆ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗೆ ಸಹಾಯ ಆಗುತ್ತದೆ. ದೇವೇಗೌಡರಿಗೆ ಅವಮಾನ ಮಾಡಿದಂತೆ ಆಗುತ್ತೆ. ಈ ದೃಷ್ಟಿ ಇಟ್ಟುಕೊಂಡು ಮಾಡಿರುವ ಕೆಲಸ ಇದು. ಇಲ್ಲ ಅಂದ್ರೆ ರೇವಣ್ಣಗೆ ಬೇಲ್ ಸಿಗೋದಕ್ಕೆ ಸಾಧ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Poll (Public Option)

Post a comment
Log in to write reviews