ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ತಂಡ ಸೇರಿದ ದಿನೇಶ್ ಕಾರ್ತಿಕ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಎಸ್ಎ 20 ಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಜನವರಿ 9 ರಿಂದ ಪ್ರಾರಂಭವಾಗುವ ಹೊಸ ಋತುವಿಗೆ ಮುಂಚಿತವಾಗಿ ಕಾರ್ತಿಕ್ ವಿದೇಶಿ ಆಟಗಾರನಾಗಿ ಪಾರ್ಲ್ ರಾಯಲ್ಸ್ ಫ್ರಾಂಚೈಸಿ ಸೇರಿಕೊಂಡಿದ್ದಾರೆ.
ಜೂನ್ನಲ್ಲಿ 39ನೇ ವರ್ಷಕ್ಕೆ ಕಾಲಿಟ್ಟ ದಿನದಂದು ಭಾರತೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ನಂತರ ಕಾರ್ತಿಕ್ ಆಡಲಿರುವ ಮೊದಲ ಪಂದ್ಯಾವಳಿ ಎಸ್ಎ 20. ಭಾರತಕ್ಕಾಗಿ 180 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕಾರ್ತಿಕ್ ಕೊನೆಯ ಬಾರಿಗೆ ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಾಣಿಸಿಕೊಂಡಿದ್ದರು. ಇತ್ತೀಚೆಗೆ, ಅವರು ತಮ್ಮ ಮಾಜಿ ಆರ್ಸಿಬಿ ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗೆ ಎಸ್ಎ 20 ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದರು.
ಕಾರ್ತಿಕ್ ಟಿ20 ಸರ್ಕೀಟ್‌ನ ಅಪಾರ ಅನುಭವ ಹೊಂದಿದ್ದರು. ಅಲ್ಲದೆ ಕ್ರಿಕೆಟ್ನ ಪಂಡಿತರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರಸ್ತುತ ಸ್ಕೈ ಸ್ಪೋರ್ಟ್ಸ್ ಪರ ಹಂಡ್ರೆಟ್ ಟೂರ್ನಿಯ ವೀಕ್ಷಕ ವಿವರಣೆಗಾರರಾಗಿರುವ ಕಾರ್ತಿಕ್, 401 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸೇರಿದಂತೆ ಆರು ತಂಡಗಳಿಗಾಗಿ ಆಡಿದ್ದಾರೆ. 17 ಋತುಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಕಾರ್ತಿಕ್ ಐಪಿಎಲ್ನ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರಾಗಿದ್ದರು.
ವಿದೇಶಿ ಟಿ 20 ಲೀಗ್‌ನಲ್ಲಿ ಭಾಗವಹಿಸಲು ನಿವೃತ್ತ ಭಾರತೀಯ ಆಟಗಾರರಿಗೆ ಮಾತ್ರ ಬಿಸಿಸಿಐ ಅವಕಾಶ ನೀಡುತ್ತದೆ. ಕಳೆದ ವರ್ಷ ಅಂಬಾಟಿ ರಾಯುಡು ಸಿಪಿಎಲ್ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡಿದರೆ, ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್ ಐಎಲ್ಟಿ 20 ನಲ್ಲಿ ದುಬೈ ಕ್ಯಾಪಿಟಲ್ಸ್ ಪರ ಆಡಿದ್ದರು. ಎರಡು ವರ್ಷಗಳ ಹಿಂದೆ ಸುರೇಶ್ ರೈನಾ ಅಬುಧಾಬಿ ಟಿ10ಯಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದರು.
Poll (Public Option)

Post a comment
Log in to write reviews