ಬೆಂಗಳೂರು: ಭಾನುವಾರ ತಡರಾತ್ರಿ ಬೆಂಗಳೂರಿನ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್. ಸದಾಶಿವನಗರದ ತಮ್ಮ ನಿವಾಸದಿಂದ ಡಿಸಿಎಂ ನಗರ ಪ್ರದಕ್ಷಿಣೆ ಮಾಡಿದರು, ಇದರಿಂದಾಗಿ ಏಕಾಏಕಿ ಅಧಿಕಾರಿಗಳು ಗಡಿಬಿಡಿಗೊಂಡಿದ್ದರು.
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ ಲೈನ್ ಮುಗಿದಿತು. ಡಿಸಿಎಂಗೆ ಶಾಸಕ ಹ್ಯಾರೀಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಾಥ್ ನೀಡಿದರು.
ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಗಡುವು ನೀಡಿದರು ಗಡುವು ಮುಕ್ತಾಯಗೊಂಡ ಹಿನ್ನೆಲೆ ಖುದ್ದು ರಸ್ತೆಗಿಳಿದು ಸುಮಾರು ರಾತ್ರಿ 11:30ರ ವೇಳೆಗೆ ಪ್ರದಕ್ಷಿಣೆ ಆರಂಭಿಸಿದ ಡಿಸಿಎಂ ಮಧ್ಯರಾತ್ರಿ 2 ಗಂಟೆವರೆಗೂ ಪ್ರದಕ್ಷಿಣೆ ನಡೆಸಿದರು. ಟ್ರಿನಿಟಿ ಜಂಕ್ಷನ್ನಲ್ಲಿ ಡಾಂಬರೀಕರಣಕ್ಕೂ ಮುನ್ನ ಮಾಡುವ ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲಿಸಿದರು. ರಸ್ತೆಯ ಹದಗೆಟ್ಟಿರುವ ಭಾಗವನ್ನು ಮಿಲ್ಲಿಂಗ್ ಮಾಡಿ ಡಾಂಬರೀಕರಣ ಮಾಡುವಂತೆ ಸೂಚಿಸಿದರು. ಖುದ್ದು ರಸ್ತೆಗಿಳಿದ ಡಿಸಿಎಂ, ಜಯಮಹಲ್ ರಸ್ತೆಯ ಪ್ಯಾಚ್ ವರ್ಕ್ ವೀಕ್ಷಣೆ ವೇಳೆ ಆರೆಯಿಂದ ನೆಲಕ್ಕೆ ಗುದ್ದಿ ಪರಿಶೀಲನೆ ನಡೆಸಿದರು. ಬಳಿಕ ಬನಶಂಕರಿ ಮೇಟ್ರೋ ಬಳಿಯ ಬನಶಂಕರಿ ರಸ್ತೆ ಕಾಮಗಾರಿಯನ್ನೂ ಪರಿಶೀಲಿಸಿದರು. ಜೊತೆಗೆ ಪಾಲಿಕೆ ಆಯುಕ್ತರಿಗೆ ರಸ್ತೆ ಬದಿಯಲ್ಲಿ ಅಂಗಡಿ ಹಾಕಿರೋದನ್ನ ತೆಗೆಸಬೇಕು ಅಂತ ಸೂಚನೆ ನೀಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳ ಬಗ್ಗೆ ಮಾಹಿತಿ ಬಂದಿತ್ತು, ಅದರೆ ಯಾವುದೇ ಸಮಾಧಾನಕರವಾದ ಕೆಲಸ ನನ್ನ ಗಮನಕ್ಕೆ ಬಂದಿರಲಿಲ್ಲ. 15 ದಿನದ ಹಿಂದೆ ಮೀಟಿಂಗ್ ಮಾಡಿ ಡೆಡ್ ಲೈನ್ ನೀಡಿದ್ದೆ. ಆಯುಕ್ತರು, ಜಂಟಿ ಆಯುಕ್ತರು ಎಲ್ಲರಿಗೂ ಮಾಹಿತಿ ನೀಡಿದ್ದೆ. ಕೆಲಸದ ವಿಡಿಯೋ ಮಾಡಿ ಪೋಸ್ಟ್ ಮಾಡೋದಕ್ಕೆ ಹೇಳಿದ್ದೆ. ಇದುವರೆಗೆ 14,307 ಗುಂಡಿಗಳನ್ನ ಅಧಿಕಾರಿಗಳು ಮುಚ್ಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ
ಎಲ್ಲಾ ವಿಡಿಯೋಗಳು ನನ್ನ ಮೊಬೈಲ್ ಫೋನ್ಗೆ ಬಂದಿವೆ. ಸದ್ಯದ ಮಟ್ಟಿಗೆ ಎಲ್ಲವೂ ಸಮಾಧಾನಕರವಾಗಿ ಕಾಣ್ತಾ ಇದೆ. ಆದರೂ ಒಮ್ಮೆ ನಾನು ಪರಿಶೀಲನೆ ಮಾಡಿ ನೋಡಬೇಕು. ಮಳೆ ಕಾರಣದಿಂದ ಕ್ವಾಲಿಟಿ ಮೆಂಟೇನ್ ಮಾಡೋದು ಸ್ವಲ್ಪ ಕಷ್ಟ. ಸರಿಯಾಗಿ ಕೆಲಸ ಆಗದೇ ಇದ್ದರೆ ಖಂಡಿತಾ ತಲೆದಂಡ ಎದುರಿಸಬೇಕಾಗುತ್ತೆ. ನಾಗರೀಕರಿಗೆ ಒಳ್ಳೆದಾಗ್ಬೇಕು, ಗುಂಡಿಯಿಂದ ಯಾರ ಪ್ರಾಣವೂ
Post a comment
Log in to write reviews