
ಬೆಂಗಳೂರು: ನಟ ಧನುಷ್ ಬರೆದು ನಿರ್ದೇಶಿಸಿರುವ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻರಾಯನ್ʼ ಸಿನಿಮಾವನ್ನು, ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಜುಲೈ 26ಕ್ಕೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಸಿನಿಮಾದ ಟ್ರೈಲರ್ ಬಹಳ ರೋಚಕತೆಯಿಂದ ಕೂಡಿದ್ದು, ಈಗಾಗಲೇ ಸಿನಿಮಾದ ಆಡಿಯೊ ಲಾಂಚ್ ಬಹಳ ಅದ್ಧೂರಿಯಾಗಿ ನೆರವೇರಿದೆ. ಇದೀಗ ಸಿನಿಮಾ ಬಿಡುಗಡೆಗೂ ಮುಂಚೆ ನಟ ಧನುಷ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದಲ್ಲಿ ಧ್ಯಾನ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಪುತ್ರರಾದ ಯಾತ್ರಾ ಮತ್ತು ಲಿಂಗ ಕೂಡ ಜತೆಗೆ ಇದ್ದರು. ಜುಲೈ 26 ರಂದು ತಮಿಳು ಮತ್ತು ತೆಲುಗಿನಲ್ಲಿ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗಿದೆ. ಇನ್ನು ಈ ಸಿನಿಮಾ ಧನುಷ್ ಅವರ 50ನೇ ಸಿನಿಮಾ ಎನ್ನುವುದು ವಿಶೇಷ. ಚಿತ್ರದಲ್ಲಿ ಎಸ್‌ಜೆ ಸೂರ್ಯ, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ಅಪರ್ಣಾ ಬಾಲಮುರಳಿ, ದುಶಾರ ವಿಜಯನ್, ಪ್ರಕಾಶ್ ರಾಜ್ ಮತ್ತು ಸೇವಾರಾಘವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಚಿತ್ರ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿದೆ. ‘ರಾಯನ್ಸ್’ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ, ಓಂ ಪ್ರಕಾಶ್ ಅವರ ಛಾಯಾಗ್ರಹಣ ಮತ್ತು ಪ್ರಸನ್ನ ಜಿಕೆ ಸಂಕಲನವಿದೆ.
Poll (Public Option)

Post a comment
Log in to write reviews