
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡೆವಿಲ್ ದ ಹೀರೋ ಚಿತ್ರಕ್ಕೆ ಕರಾವಳಿ ಚೆಲುವೆ ರಚನಾ ರೈ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಡೆವಿಲ್ ದ ಹೀರೋ ಚಿತ್ರಕ್ಕೆ ರಚನಾ ರೈ ಅವರೇ ನಾಯಕಿ ಎಂಬ ಮಾತುಗಳು ದಶ೯ನ್ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿತ್ತು.ಆದರೆ ಡೆವಿಲ್ ಚಿತ್ರತಂಡ ಸಿನಿಮಾದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಟ್ವೇಟ್ ಸಹ ಮಾಡಿದ್ದರು. ಇಂದು ಚಿತ್ರತಂಡವೇ ಅಧಿಕೃತವಾಗಿ ರಚನಾ ರೈ ನಾಯಕಿ ಎಂದು ಪೋಸ್ಟ್ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ಚಿತ್ರಕ್ಕೆ ಮಿಲನ ಚಿತ್ರ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶನವಿದ್ದು, ಜೈಮಾತಾ ಕಂಬೈನ್ಸ್ ಬಂಡವಾಳ ಹೂಡಲಿದೆ. ಹಾಗೆಯೇ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
Poll (Public Option)

Post a comment
Log in to write reviews