
ಅಕ್ಷಯ ತೃತೀಯದಂದು ದರ್ಶನ್ ನಟನೆಯ ಡೆವಿಲ್ -ದಿ ಹೀರೋ ಸಿನಿಮಾ ತಂಡ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋ ಸಿನಿ ಪ್ರಿಯರಲ್ಲಿ ಉತ್ಸಾಹ ಜಾಸ್ತಿ ಮಾಡಿದ್ದು, ವಿಡಿಯೋದಲ್ಲಿರುವ ಆಕ್ಷನ್ ದೃಶ್ಯಗಳು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಪ್ಪು ಹಾಗೂ ಕೆಂಪು ಬಣ್ಣದ ಸೂಟ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ ಈವರೆಗಿನ ಅವರ ಚಿತ್ರಗಳಿಗಿಂತ ಅತ್ಯಂತ ವಿಶಿಷ್ಟವಾಗಿದೆ ಎಂದು ಹೇಳಬಹುದು
ಇದೇ ವೇಳೆ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಕೈ ಮುರಿದುಕೊಂಡಿದ್ದರು. ಈಗ ದರ್ಶನ್ ಚೇತರಿಸಿಕೊಂಡಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಡೆವಿಲ್ ಚಿತ್ರದ ಚಿತ್ರೀಕರಣ ಮೇ 15 ರಿಂದ ಮತ್ತೆ ಆರಂಭವಾಗಲಿದೆ
Poll (Public Option)

Post a comment
Log in to write reviews