
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಚಿತ್ರ ಡೆವಿಲ್ ಇದೇ ಡಿಸೆಂಬರ್ 2024 ಕ್ರಿಸ್‌ಮಸ್ ಹಬ್ಬದಂದು ತೆರೆಯ ಮೇಲೆ ಬರಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಇದರ ಬಗ್ಗೆ ವೈಷ್ಣೋಸ್ಟೂಡಿಯೋ ಅಫೀಷಿಯಲ್ ಸಂಸ್ಥೆ ತನ್ನ ಅಧೀಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್ ಅನ್ನು ಹಾಕಿದೆ.
ಈ ಹಿಂದೆ ದರ್ಶನ್‌ರವರು ಒಂದು ಸಮಾರಂಭದಲ್ಲಿ ಡೆವಿಲ್ ಸಿನಿಮಾ ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಅದರ ನಡುವೆ ದರ್ಶನ್ ರವರ ಕೈಗೆ ಏಟ್ ಆಗಿ ಸ್ವಲ್ಪ ಸಮಯದವರೆಗೆ ಶೂಟಿಂಗ್ ಅನ್ನು ನಿಲ್ಲಿಸಿದ್ದರು. ಇದೆಲ್ಲದರ ನಡುವೆ ಈಗ ಚಿತ್ರ ತಂಡ 2024 ಡಿಸೆಂಬರ್ 25 ಕ್ಕೆ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದು ಅಧೀಕೃತವಾಗಿ ತಿಳಿಸಿದೆ. ಚಿತ್ರ ತಂಡ ನೀಡಿರುವ ಈ ಅನಿರೀಕ್ಷಿತ ಅಪ್ಡೇಟ್ ದರ್ಶನ್ ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ. ಈ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದು, ಜೆ ಜಯಮ್ಮ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಗೆಯೇ ರಚನಾರೈ ಈ ಸಿನಿಮಾಗೆ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ.
Poll (Public Option)

Post a comment
Log in to write reviews