
ಇಂದಿನಿಂದ ಇಡೀ ದೇಶದಾದ್ಯಂತ jr. ಎನ್‌ಟಿಆರ್ ನಟನೆಯ, ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ರಿಲೀಸ್ ಆಗಿದ್ದು, jr. ಎನ್‌ಟಿಆರ್ ಜತೆಗೆ ನಟ ಸೈಫ್ ಅಲಿ ಖಾನ್, ನಟಿ ಜಾನ್ವಿ ಕಪೂರ್ ಕೂಡ ಇದ್ದಾರೆ. ಇಷ್ಟೇ ಅಲ್ಲ ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.
ಇತ್ತೀಚೆಗೆ ರಿಲೀಸ್ ಆಗಿದ್ದ jr. ಎನ್‌ಟಿಆರ್ ರವರ ಆರ್‌ಆರ್‌ಆರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಕೋಟಿ ಗಟ್ಟಲೆ ಕಲೆಕ್ಷನ್ ಮಾಡಿತ್ತು. ಈಗ ಎನ್‌ಟಿಆರ್ ಸೋಲೋ ಸಿನಿಮಾ ಬರುತ್ತಿದೆ. ಬರೋಬ್ಬರಿ 6 ವರ್ಷಗಳ ನಂತರ ಎನ್‌ಟಿಆರ್ ಸೋಲೋ ಸಿನಿಮಾ ‘ದೇವರ’ ರಿಲೀಸ್ ಆಗಿದೆ.
ಇಷ್ಟೇ ಅಲ್ಲ ‘ಆಚಾರ್ಯ’ ಹೀನಾಯ ಸೋಲಿನ ನಂತರ ರಿಲೀಸ್ ಆಗುತ್ತಿರೋ ಕೊರಟಾಲ ಶಿವ ನಿರ್ದೇಶನದ ಮೊದಲ ಸಿನಿಮಾ ಆಗಿದೆ. ಹೀಗಾಗಿ ಕೊರಟಾಲ ಶಿವ ದೇವರ ಸಿನಿಮಾ ಮೂಲಕ ದೊಡ್ಡ ಕಮ್ಬ್ಯಾಕ್ಗಾಗಿ ಕಾಯುತ್ತಿದ್ದಾರೆ.
ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಇದೆ ಎಂದರೆ ಎಲ್ಲರಲ್ಲೂ ಬಹಳ ನಿರೀಕ್ಷೆ ಇದ್ದೇ ಇರುತ್ತದೆ. ಜೈಲರ್ ಮೂಲಕ ಭಾರೀ ಗಮನ ಸೆಳೆದಿದ್ದ ಇವರು ದೇವರ ಸಿನಿಮಾ ಮೂಲಕ ತೆಲುಗಿನಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.
Poll (Public Option)

Post a comment
Log in to write reviews