
ಹುಬ್ಬಳ್ಳಿ : ಈಶ್ವರನಗರದ ವೈಷ್ಣೋದೇವಿ ಮಂದಿರದ ಸ್ಥಾಪಕ ಹಾಗೂ ಆರಾಧಕ ಮೂಲತಃ ಕುಸುಗಲ್ ಗ್ರಾಮದ ದೇವಪ್ಪಜ್ಜ ಅವರಿಗೆ ಹಂತಕರು ಚಾಕುವಿನಿಂದ ಇರಿದು ರವಿವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸಂಜೆ ಸುಮಾರು 7ಗಂಟೆ ಹೊತ್ತಿಗೆ ದೇವಸ್ಥಾನದ ಬಳಿ ಬಂದು ಹಂತಕರು ಚಾಕುವಿನಿಂದ ಇರಿದು ಪರಾರಿಯಾಗಿದ್ದು ಕೂಡಲೇ ದೇವಪ್ಪಜ್ಜನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಅವರು ಅಸುನೀಗಿದ್ದಾರೆ.
ನವನಗರದ ಎಪಿಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆಸ್ತಿ, ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ದೇವಪ್ಪಜ್ಜ ಕುಸುಗಲ್ ಅಜ್ಜನವರು ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದಿದ್ದರು. ಆನಂತರ ಈ ಹತ್ಯೆ ನಡೆದಿದೆ.
Poll (Public Option)

Post a comment
Log in to write reviews