ಟಾಪ್ 10 ನ್ಯೂಸ್
ಅಯೋಧ್ಯೆಗೆ ಹೋಗಿ ಪೂಜೆ ಮಾಡಿದರೂ ಮೋದಿಗೆ ಫಲ ಮಾತ್ರ ದೊರೆಯಲಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಕ್ಷಣ ಕ್ಷಣಕ್ಕೂ ಕೂತೂಹಲ ಕೆರಳಿಸಿದ್ದ ಲೋಕಸಭೆ ಚುನಾವಣೆ 2024ರ ಫಲಿತಾಂಶ ಹೊರಬಿದ್ದಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಟಿ ಬಂದು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ ಕರ್ನಾಟಕ ಹಾಗೂ ದೇಶದ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಇಡೀ ದೇಶದಲ್ಲಿ 3% ಕಾಂಗ್ರೆಸ್ ನ ಮತ ಹೆಚ್ಚಾಗಿದೆ. ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ವೋಟ್ ಕೊಡಿ ಅಂತಾ ಕೇಳಿದ್ದರು . ಆದರೆ ಈಗ ಕೂಡ ನರೇಂದ್ರ ಮೋದಿ ಅವ್ರ ಅಲೆ ಇಲ್ಲ. ರಾಹುಲ್ ಗಾಂಧಿ ಪರಿಶ್ರಮವನ್ನು ಜನ ಗಮನಿಸಿದ್ದಾರೆ. ಹಾಗಾಗಿ ಜನ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಯ ಹಿಂದುತ್ವ, ಅಯೋಧ್ಯೆ ಯಾವುದೂ ಕೂಡಾ ಕೆಲಸ ಮಾಡಿಲ್ಲ. ಅಯೋಧ್ಯೆಗೆ ಹೋಗಿ ಪೂಜೆ ಮಾಡಿದರೂ ಸಹ ಬಿಜೆಪಿಗೆ ಅದರಲ್ಲೂ ನರೇಂದ್ರ ಮೋದಿಗೆ ಫಲ ಸಿಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Poll (Public Option)

Post a comment
Log in to write reviews