
ಚುನಾವಣೆಯ ನಂತರ ಹಣ ಬರುತ್ತದೆ ಎಂಬ ಗಾಳಿಸುದ್ದಿ ಆಧರಿಸಿ ದಾಖಲೆ ಪ್ರಮಾಣದಲ್ಲಿ ಅಂಚೆ ಇಲಾಖೆಯಲ್ಲಿ ಮಹಿಳೆಯರು ಖಾತೆ ತೆರೆಯುತ್ತಿರುವ ಪ್ರಕರಣ ಬಳಕಿಗೆ ಬಂದಿದೆ.
ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಾದ ನ್ಯಾಯ್ ಯೋಜನೆ ಜಾರಿ ಭರವಸೆ ನೀಡಲಾಗಿತ್ತು. ಬಿಜೆಪಿ ಕೂಡ ತನ್ನ ಸಂಕಲ್ಪ ಪತ್ರದಲ್ಲಿ ಮೋದಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರಚಾರ ನಡೆಸಲಾಗಿತ್ತು.
ಪ್ರಚಾರದ ವೇಳೆ ಕೇಂದ್ರದಿಂದ ನೆರವು ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು ಎಂದು ಅಭ್ಯರ್ಥಿಗಳು, ಮುಖಂಡರು ಹೇಳಿದ್ದರು ಎನ್ನಲಾಗಿದೆ. ಇದನ್ನು ನಂಬಿರುವ ಮಹಿಳೆಯರು ಮತದಾನ ಮಾಡಿದ ನಂತರ ಖಾತೆ ತೆರೆಯಲು ಅಂಚೆ ಇಲಾಖೆಗೆ ಮುಗಿ ಬಿದ್ದಿದ್ದಾರೆ.
ಇಂತಹ ಯಾವುದೇ ಯೋಜನೆ ಜಾರಿ ಮಾಡಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಪದೇ ಪದೇ ತಿಳಿ ಹೇಳಿದರೂ ಆದರು ಮಹಿಳೆಯರು ಕೇಳುವ ಸ್ಥಿತಿಯಲ್ಲಿಲ್ಲ. ಇದರಿಂದಾಗಿ ಖಾತೆ ತೆರೆಯಲು ಮುಂದಾಗುವ ಗ್ರಾಹಕರನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಪ್ರತಿದಿನ ಮೊದಲು ಆಗಮಿಸುವವರಿಗೆ ಟೋಕನ್ ನೀಡಲಾಗುತ್ತಿದೆ ಎಂದು ಇಲಾಖಾ ಸಿಬ್ಬಂದಿ ತಿಳಿಸಿದ್ದಾರೆ.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಕಳೆದ ಒಂದು ತಿಂಗಳಲ್ಲಿ 20 ಸಾವಿರಕ್ಕೂ ಅಧಿಕ ಖಾತೆಗಳನ್ನು ತೆರೆಯಲಾಗಿದೆ ಎಂದು ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಹಣ ಹಾಕುತ್ತಾರೆ ಎಂದು ನಂಬಿರುವ ಇವರುಗಳ ಖಾತೆಗೆ ಯಾರು ಹಣ ಹಾಕುತ್ತಾರೆ ಎಂಬುದು ಮಾತ್ರ ತಿಳಿಯುತ್ತಿಲ್ಲ. ಹೀಗಿದ್ದರೂ ಕೆಲ ಮಹಿಳೆಯರು ತಮ್ಮ ಮೇಲಿನ ವಿಶ್ವಾಸದ ಮೇಲೆ ಖಾತೆ ತೆರೆಯುತ್ತಲೇ ಇದ್ದಾರೆ.
Poll (Public Option)

Post a comment
Log in to write reviews