2024-12-24 06:53:44

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡಿಸಿಎಂ ಹುದ್ದೆಯ ಬಗ್ಗೆ ಹೈಕಮಾಂಡ್ ಬಳಿ ಮಾತನಾಡಿ ಪರಿಹಾರ ತರಲಿ, ಡಿ.ಕೆ. ಶಿವಕುಮಾರ್

ಬೆಂಗಳೂರು: "ಹೆಚ್ಚುವರಿ ಡಿಸಿಎಂ ಹುದ್ದೆಯ ಬಗ್ಗೆ ಹೈಕಮಾಂಡ್ ಬಳಿ ಮಾತನಾಡಿ, ಪರಿಹಾರ ತರಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆಂಪೇಗೌಡರ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಡಿಸಿಎಂ ಹುದ್ದೆ ಸೃಷ್ಟಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಮುಂದೆ ಮಾತನಾಡಲಿ. ಏನು ಬೇಕಾದರೂ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮದ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮದವರು ಪರಿಹಾರ ಕೊಡುವುದಿಲ್ಲ. ಮಾಧ್ಯಮದವರು ಪ್ರಚಾರ ಕೊಡುತ್ತೀರ ಅಷ್ಟೇ. ಏನೇ ಇದ್ದರೂ ಹೈಕಮಾಂಡ್ ಮುಂದೆ ಹೋಗಿ ಮಾತನಾಡಿ ಪರಿಹಾರ ತೆಗೆದುಕೊಂಡು ಬರಲಿ" ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಒತ್ತಾಯ ಸಂಬಂಧ ಪ್ರತಿಕ್ರಿಯಿಸಿ, ಬಹಳ ಸಂತೋಷ, ಟೈಮ್ ವೇಸ್ಟ್ ಮಾಡಬಾರದು. ಏನೇನು ಬೇಕು ಹೈಕಮಾಂಡ್ ಮುಂದೆ ಹೋಗಿ ಪರಿಹಾರ ಪಡೆಯಲಿ. ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಹೋಗಿ ಪರಿಹಾರ ಪಡೆಯಲಿ. ಡಾಕ್ಟರ್ ಬಳಿ ಹೋದರೆ ಔಷಧಿ ಕೊಡುತ್ತಾರೆ. ಲಾಯರ್ ಬಳಿ ಹೋದರೆ ನ್ಯಾಯ, ಪರಿಹಾರ ಕೊಡುತ್ತಾರೆ. ಎಲ್ಲೆಲ್ಲಿ ಹೋಗಬೇಕು ಅಲ್ಲಿಗೆ ಹುಡುಕಿಕೊಂಡು ಹೋಗಲಿ. ಯಾರು ಬೇಕಾದರು ಹೋಗಲಿ. ನನ್ನದೇನು ಅಭ್ಯಂತರ ಇಲ್ಲ" ಎಂದರು.
ಲೋಪವಾಗಿದೆ, ಸರಿಪಡಿಸೋಣ:
 ಕೆಂಪೇಗೌಡ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಕೈಬಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ  ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ನಾವು ಯಾರಿಗೂ ಅಗೌರವ ಕೊಡುವ ಅಗತ್ಯ ಇಲ್ಲ. ಎಸ್.ಎಂ.ಕೃಷ್ಣ ಇದ್ದಾರೆ. ಸದನಾಂದ ಗೌಡರು ಇದ್ದಾರೆ. ದೇವೇಗೌಡರು ಇದ್ದಾರೆ. ಕುಮಾರಸ್ವಾಮಿಯವರೂ ಇದ್ದಾರೆ. ಸಮಾಜದವರನ್ನು ಸೇರಿಸಬೇಕಿತ್ತು. ಅಧಿಕಾರಿಗಳು ಪ್ರೊಟೋಕಾಲ್ ನೋಡಿದ್ದಾರೆ. ಅದರಂತೆ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ದೇವೇಗೌಡರು ಹಾಸನ ಜಿಲ್ಲೆ ವ್ಯಾಪ್ತಿಗೆ ಬರುತ್ತಾರೆ. ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಸಂಸದರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನಿಂದ ಆಯ್ಕೆಯಾಗಿದ್ದು, ಅವರ ಹೆಸರು ಹಾಕಲಾಗಿದೆ" ಎಂದರು.
"ಹೆಸರು ಹಾಕಬಾರದು ಅಂತೇನಿಲ್ಲ, ಹಾಕಬೇಕು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸೋಣ. ಇದರ ಜೊತೆಗೆ ಬೇರೆ ಸಮುದಾಯದ ಸ್ವಾಮಿಗಳನ್ನೂ ಕರೆಯಬೇಕಿತ್ತು. ಕೆಂಪೇಗೌಡರು ಬರೀ ಒಕ್ಕಲಿಗರ ಆಸ್ತಿಯಲ್ಲ. ಅವರು ಎಲ್ಲಾ ಸಮಾಜದ ಆಸ್ತಿಯಾಗಿದ್ದಾರೆ. ಏನೋ ಲೋಪವಾಗಿದೆ. ಮುಂದೆ ಸರಿಪಡಿಸೋಣ" ಎಂದು ಡಿಕೆಶಿ ತಿಳಿಸಿದರು.
 

Post a comment

No Reviews