
ಬೆಂಗಳೂರು: ಕರ್ನಾಟಕದಲ್ಲಿ ಡೆಂಗ್ಯೂ ಪರೀಕ್ಷೆಗೆ ದರ ನಿಗದಿಪಡಿಸಲಾಗಿದ್ದರೂ ಬೆಂಗಳೂರು ನಗರದಾದ್ಯಂತ ಅನೇಕ ಲ್ಯಾಬ್‌ಗಳು ನಿಗದಿತ ದರಕ್ಕಿಂತ 2ರಿಂದ 10 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಎನ್ಎಸ್1 ಆ್ಯಂಟಿಬಾಡಿ ಇಎಲ್ಐಎಸ್ಎ ಮತ್ತು ಐಜಿಎಂ ಆ್ಯಂಟಿಬಾಡಿ ಪರೀಕ್ಷೆಗೆ 300 ರೂ. ದರ ನಿಗದಿಪಡಿಸಿತ್ತು. ಮತ್ತು ಎನ್ಎಸ್1 ಆ್ಯಂಟಿಬಾಡಿ, ಐಜಿಎಂ ಮತ್ತು ಐಜಿಜಿ ಆ್ಯಂಟಿಬಾಡಿಗಳ ಕ್ಷಿಪ್ರ ಪರೀಕ್ಷೆಗಳಿಗೆ 250 ರೂ. ನಿಗದಿಪಡಿಸಲಾಗಿದೆ. ಆದರೆ ಬೆಂಗಳೂರು ಲ್ಯಾಬ್‌ಗಳು ಡೆಂಗ್ಯೂ ಪರೀಕ್ಷೆಗೆ ಸಾಮಾನ್ಯವಾಗಿ 500 ರಿಂದ 1000 ರೂ. ಶುಲ್ಕ ಪಡೆಯುತ್ತಿವೆ ಎನ್ನಲಾಗಿದೆ.
Poll (Public Option)

Post a comment
Log in to write reviews