
ರಾಜ್ಯದಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ.ಹವಮಾನ ವೈಫರಿತ್ಯದಿಂದಾಗಿ ಕೆಲವೋಮ್ಮೆ ಮಳೆ ಆಗಿದ್ದು ಗುಂಡಿಗಳಲ್ಲಿ ,ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಅಲ್ಲಲ್ಲಿ ನೀರು ಶೇಕರಣೆಯಾಗಿದೆ.ಇದರಿಂದಾಗಿ ಇಡಿ ರಾಜ್ಯವೇ ಸೊಳ್ಳೆಯ ಆಗರ ತಾಣವಾಗಿದೆ. ಅದರಲ್ಲೂ ಹಾವೇರಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು 14 ವರ್ಷದ ಮಕ್ಕಳು ಶೇಕಡ 80 ತುತ್ತಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ 162 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 108 ಮಕ್ಕಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲಾಸ್ಪತ್ರೆ ಒಂದರಲ್ಲೆ 50 ಕ್ಕೂ ಹೆಚ್ಚು ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳು ಹೆಚ್ಚಾಗಿವೆ ಎಂದು ಜಿಲ್ಲಾಸ್ಷತ್ರೆ ತಿಳಿಸಿದೆ.
ಈ ವರ್ಷ ಹಾವೇರಿ-10, ಬ್ಯಾಡಗಿ-30, ರಾಣೇಬೆನ್ನೂರು-18, ಹಿರೇಕೆರೂರು-20, ರಟ್ಟಿಹಳ್ಳಿ-08, ಶಿಗ್ಗಾಂವಿ-06, ಸವಣೂರು-01, ಹಾನಗಲ್-69 ಸೇರಿ ಒಟ್ಟು 162 ಕೇಸ್ ಗಳು ಪತ್ತೆಯಾಗಿವೆ. ಡೆಂಗ್ಯೂ ಪ್ರಕರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳು ನರಳಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಡೆಂಗ್ಯೂ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲು ಮುಂದಾಗಿದ್ದು, ಜನರು ಕೂಡ ಸಹಕರಿಸುವಂತೆ ಮನವಿ ಮಾಡಿದೆ.
Poll (Public Option)

Post a comment
Log in to write reviews