
ವಿಜಯಪುರ: ಗುಡುಗು ಸಮೇತ ಮಳೆಯಿಂದಾಗಿ ಗ್ರಾಮಿಣ ಭಾಗದ ಮನೆಗಳು ನೆಲಸಮವಾಗಿರುವ ಘಟನೆ ಮುದ್ದೇಬಿಹಾಳದಲ್ಲಿ ನಡೆದಿದೆ.
ರಾತ್ರಿ ಸುರಿದ ಭೀಕರ ಮಳೆಗೆ ಕುಂಟೋಜಿ ಗ್ರಾಮದ ಮಲ್ಲನಗೌಡ ಬಸನಗೌಡ ಬಿರದಾರ, ಢವಳಗಿ ಗ್ರಾಮದ ಭೀಮಪ್ಪ ಮಾದರ, ಗುರುಲಿಂಗಪ್ಪ ಮೂಲಿಮನಿ, ಚೊಂಡಿ ಗ್ರಾಮದ ಯಂಕವ್ವ ಪಾಟೀಲ ಎಂಬುವವರ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ ಮತ್ತು ಮುದ್ದೇಬಿಹಾಳದಲ್ಲಿ ಅಡವಿ ಹಳ್ಳ ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.
ಈ ಅವಘಡದಿಂದಾಗಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಯಮದಂತೆ ಮನೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
Poll (Public Option)

Post a comment
Log in to write reviews