ಕೊಡಗು : ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳ ವಿರುದ್ಧ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಇದೀಗ, ಹೋರಾಟಗಾರರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದು, ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಲಿದ್ದಾರೆ.
ಕೊಡಗು ಜಿಲ್ಲೆಯ ಪ್ರವಾಸೋಧ್ಯಮ ಕಳೆದ ಕೆಲವು ತಿಂಗಳಿನಿಂದ ಹಾರಂಗಿ ಅಡ್ವೆಂಚರ್ ವಾಟರ್ ಗೇಮ್ಸ್, ಗ್ರೇಟರ್ ರಾಜಾಸೀಟ್ ಅಡ್ವೆಂಚರ್ಸ್ ಗೇಮ್ಸ್ ಹೀಗೆ ಹತ್ತು ಹಲವು ಚಟುವಟಿಕೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇದೀಗ ಅವುಗಳ ಸಾಲಿಗೆ ಸೇರಿರುವುದು ಗ್ಲಾಸ್ ಬ್ರಿಡ್ಜ್ಗಳು. ಈಗಾಗಲೇ ಜಿಲ್ಲೆಯ ಎರಡು ಕಡೆ ಗ್ಲಾಸ್ ಬ್ರಿಡ್ಜ್ಗಳು ತಲೆ ಎತ್ತಿವೆ. ಈ ಗ್ಲಾಸ್ ಬ್ರಿಡ್ಜ್ಗಳು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆದಿವೆ.
ಆದರೆ, ಭಾರೀ ಮಳೆ ಬಂದ ಸಂದರ್ಭದಲ್ಲಿ ಹಲವು ಕಡೆ ಲಘು ಭೂ ಕುಸಿತಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜಾ ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಆದರೆ ಇದೀಗ, ಈ ಎರಡು ಗ್ಲಾಸ್ ಬ್ರಿಡ್ಜ್ಗಳು ಹಾಗೂ ತಲಕಾವೇರಿ ಮತ್ತು ಭಾಗಮಂಡಲ ಬಳಿಯ ಗ್ಲಾಸ್ ಬ್ರಿಡ್ಜ್ಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಧೋಳ್ಪಾಡಿ ಯಶ್ವಂತ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
Post a comment
Log in to write reviews