
ಪುಣೆ:ಐಷಾರಾಮಿ ಕಾರೊಂದು ಡೆಲಿವರಿ ಏಜೆಂಟ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪುಣೆಯ ಮುಂಡ್ವಾ ಪ್ರದೇಶದಲ್ಲಿ ನಡೆದಿದೆ. ಕಾರು ಚಾಲಕ ಪರಾರಿಯಾಗಲು ಯತ್ನಿಸಿದರಾದರೂ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯು ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ರೌಫ್ ಶೇಖ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ 34 ವರ್ಷದ ಆಯುಷ್ ತಯಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧದ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕಾರನ್ನು ಗುರುತಿಸಿ ಬಂಧಿಸಲಾಗಿದೆ. ಮುಂಡ್ವಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 105, 281, 125 (ಎ), 132, 119,1 77, 184 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಈ ವರ್ಷದ ಮೇನಲ್ಲಿ ನಡೆದ ಪುಣೆ ಪೋಷೆ ಅಪಘಾತದಂತೆಯೇ ಇದೆ.
ಮದ್ಯದ ಅಮಲಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋಷೆ ಕಾರು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು 24 ವರ್ಷದ ಅನೀಶ್ ಅವಧಿಯಾ ಮತ್ತು ಆತನ ಸ್ನೇಹಿತೆ ಅಶ್ವಿನಿ ಕೋಷ್ಟಾ ಮೃತಪಟ್ಟಿದ್ದಾರೆ. ಈ ಘಟನೆಯ ಬಳಿಕ ಪೊಲೀಸರು ಬಾಲಕನಿಗೆ ತೋರಿದ ಮೃದುತ್ವದ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ವಿವಾದವನ್ನು ಹುಟ್ಟುಹಾಕಿತ್ತು.
Tags:
Poll (Public Option)

Post a comment
Log in to write reviews