2024-12-24 06:11:39

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹಾಲಿ ಚಾಂಪಿಯನ್ಸ್‌ನ ಮಣಿಸಿ ಫೈನಲ್‌ಗೆ ಪ್ರವೇಶಿಸಿದ ಟೀಂ ಇಂಡಿಯಾ

ಗಯಾನ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್‌ ತಂಡವನ್ನು ಬಹುದೊಡ್ಡ ಅಂತರದಿಂದ ಸೋಲಿಸಿ ಫೈನಲ್‌ ಗೆ ಲಗ್ಗೆ ಇಟ್ಟಿದೆ.
ಪ್ರಾವಿಡೆನ್ಸಿ ಕ್ರೀಡಾಂಗಣದಲ್ಲಿ ಜೂನ್‌ 27 ರಂದು ಟೂರ್ನಿಯ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಮತ್ತು ಇಂಡಿಯಾ ನಡುವೆ ಪಂದ್ಯ ಏರ್ಪಟ್ಟಿತು. ಈ ಪಂದ್ಯದಲ್ಲಿ ಟೀ ಇಂಡಿಯಾ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ರೋಹಿತ್‌ ಶರ್ಮಾರ ಉತ್ತಮ ಅರ್ಧಶತಕ ಹಾಗೂ ಸೂರ್ಯಕುಮಾರ್‌ ಯಾದವ್‌ರ ಚಾಣಾಕ್ಷತನದ ಬ್ಯಾಟಿಂಗ್‌ನ ನೆರವಿನಿಂದ ಇಂಗ್ಲೆಂಡ್‌ ಗೆ ಟೀ ಇಂಡಿಯಾ 172 ರನ್‌ ಗುರಿಯನ್ನು ನೀಡಿತು.

ಈ ಗುರಿಯನ್ನು ಬೆನ್ನಟಿದ ಇಂಗ್ಲೆಂಡ್‌ ತಂಡ ಕೇವಲ 103 ರನ್‌ ಗಳಿಗೆ ಆಲೌಟ್ ಆಗುವ ಮೂಲಕ ಇಂಡಿಯಾದ ವಿರುದ್ಧ ಸೋತಿತು. ಈ ಮೂಲಕ ಹಾಲಿ ಚಾಂಪಿಯನ್‌ ನ ಟ್ರೋಪಿ ಕನಸು ನುಚ್ಚು ನೂರಾಯಿತು. ಹಾಗೆಯೇ ಟೀಂ ಇಂಡಿಯಾ ದಶಕಗಳ ನಂತರ  ಟಿ20 ಟೂರ್ನಿಯಲ್ಲಿ  ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತು.

Post a comment

No Reviews