
ಗುಂಡ್ಲುಪೇಟೆ: ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾದ ಪರಿಣಾಮ ಭಾನುವಾರ (ಜೂನ್ 9) ಜಿಂಕೆ ಹಾಗೂ ಸೀಳುನಾಯಿ ಮೃತಪಟ್ಟ ಘಟನೆ ಬಂಡೀಪುರದ ಮದ್ದೂರು ವಲಯದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಸುಲ್ತಾನ್ ಬತ್ತೇರಿಯ ನಿವಾಸಿ ಸ್ಟೆಫನ್ ಸನ್ನಿ ಎಂಬಾತನನ್ನು ಬಂಧಿಸಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಈತನ ಕಾರು ಡಿಕ್ಕಿ ಹೊಡೆದ ಪರಿಣಾಮ ಅಂದಾಜು 5 ವರ್ಷದ ಗಂಡು ಸೀಳುನಾಯಿ ಹಾಗೂ 3 ವರ್ಷದ ಒಂದು ಗಂಡು ಜಿಂಕೆ ಸಾವನ್ನಪ್ಪಿವೆ. ಘಟನೆ ನಡೆದ ಬಳಿಕ ಸನ್ನಿ ಪರಾರಿಯಾಗಲು ಯತ್ನಿಸಿದ್ದು ಈತನನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಸನ್ನಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
Poll (Public Option)

Post a comment
Log in to write reviews