
ಶಿವಮೊಗ್ಗ: ಕಾಡಿಗೆ ಮೇಯಲು ಹೋಗಿದ್ದ ದನಗಳ ಗುಂಪಿನ ಜೊತೆ ಜಿಂಕೆಯೊಂದು ಗ್ರಾಮಕ್ಕೆ ಬಂದಿರುವ ಅಪರೂಪದ ಘಟನೆ ಜಿಲ್ಲೆಯ ಆಯನೂರು ಹೋಬಳಿಯ ಕೊರಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಳಿಕ ಗ್ರಾಮಸ್ಥರೆಲ್ಲ ಸೇರಿ ಜಿಂಕೆಯನ್ನು ಮರಳಿ ಕಾಡಿಗೆ ಬಿಡಲಾಯಿತು. ಜಿಂಕೆಯು ಹೊರಬೈಲು ಕಾಡಿನಿಂದ ದನಗಳ ಜೊತೆ ಕೊರಗಿ ಗ್ರಾಮಕ್ಕೆ ಬಂದಿತ್ತು. ಜಿಂಕೆಯ ಮೇಲೆ ಊರಿನ ನಾಯಿಗಳು ದಾಳಿ ಮಾಡಿದ್ದು, ಅದನ್ನು ರಕ್ಷಿಸಿದ ಗ್ರಾಮಸ್ಥರು ಚೋರಡಿ ವಲಯ ಅಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹಾಗೆ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಚಿಕಿತ್ಸೆ ಕೊಡಿಸಿ ಜಿಂಕೆಯನ್ನು ಮರಳಿ ಕಾಡಿಗೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews