2024-12-24 07:53:36

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪತಿಗೆ ಮೂರನೇ ಮದುವೆ ಮಾಡಿಸಿದ ಮುದ್ದಿನ ಮಡದಿಯರು

ಆಂಧ್ರಪ್ರದೇಶ: ಪತ್ನಿಯರಿಬ್ಬರು ಸೇರಿ ಪತಿಗೆ ಮೂರನೇ ಮದುವೆ ಮಾಡಿಸಿದ ವಿಚಿತ್ರ ಘಟನೆ ಆಂಧ್ರ ಪ್ರದೇಶದ ಅಲ್ಲೂರಿ ಜಿಲ್ಲೆಯಲ್ಲಿ ನಡೆದಿದೆ. ಎರಡನೇ ಮಗು ಬೇಕು ಎಂಬ ಗಂಡನ ಬಯಕೆಯನ್ನು ಈಡೇರಿಸಲು ಪತ್ನಿರಿಬ್ಬರು ಸೇರಿ ತಮ್ಮ ಪತಿಗೆ ಮೂರನೇ ಮದುವೆಯನ್ನು ಮಾಡಿಸಿದ್ದಾರೆ. ಪಾಂಡಣ್ಣ ಎಂಬವರು 2000 ನೇ ಇಸವಿಯಲ್ಲಿ ಪಾರ್ವತಮ್ಮ ಎಂಬವರನ್ನು ವಿವಾಹವಾಗಿದ್ದರು. ಆದರೆ ಅವರಿಗೆ ಮಕ್ಕಳಾಗದ ಕಾರಣ 2005 ರಲ್ಲಿ ಪಾಂಡಣ್ಣ ಅಪ್ಪಳಮ್ಮ ಎಂಬವರನ್ನು ಎರಡನೇ ಮದುವೆಯಾದರು. ಬಳಿಕ ಈ ದಂಪತಿಗೆ 2007 ರಲ್ಲಿ ಗಂಡು ಮಗು ಜನಿಸುತ್ತದೆ. ಆದರೆ ಇದೀಗ ಪಾಂಡಣ್ಣ ತನಗೆ ಎರಡನೇ ಮಗು ಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದು, ಪತಿಯ ಈ ಮನದಾಸೆಯನ್ನು ಈಡೇರಿಸಲು ಪತ್ನಿಯರಿಬ್ಬರು ಸೇರಿ ಪಾಂಡಣ್ಣನಿಗೆ ಮೂರನೇ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ.

Post a comment

No Reviews