ಬೆಂಗಳೂರು : ಯಲಹಂಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಿಂಗಳಿಗೆ 25 ಕೋಟಿ ಕಲೆಕ್ಷನ್ ಆಗುತ್ತಿದ್ದು, ಅದರಲ್ಲಿ 8 ಕೋಟಿ ದೊಡ್ಡವರಿಗೆ ಹೋಗುತ್ತಿದೆ ಎಂದು ಖುದ್ದು ಯಲಹಂಕ MLA ಹೇಳಿದ್ದಾರೆ. MLA ಎಸ್.ಆರ್.ವಿಶ್ವನಾಥ್ ಅವರು ಅಸೆಂಬ್ಲಿಯಲ್ಲೇ ಯಲಹಂಕ ಸಬ್ ರಿಜಿಸ್ಟ್ರಾರ್ ಕಚೇರಿಯ ಲಂಚದ ಬಾಂಬ್ ಸಿಡಿಸಿದ್ದಾರೆ.ಸ್ಫೋಟಕ ಸುದ್ದಿಯಾಗಿದ್ದು, ಯಲಹಂಕ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಹಗಲು ಹೊತ್ತಿನಲ್ಲೇ ಲೂಟಿ ನಡೆಯುತ್ತಿದೆ.
ಸಬ್ ರಿಜಿಸ್ಟ್ರಾರ್ಗಳು ಅಕ್ರಮ ಲೇಔಟ್ಗಳಲ್ಲಿ ಸೈಟ್ಗಳ ಅಕ್ರಮ ರಿಜಿಸ್ಟರ್ ಮಾಡುತ್ತಿದ್ದಾರೆ. ಒಂದೊಂದು ಸೈಟ್ ರಿಜಿಸ್ಟ್ರೇಷನ್ಗೆ 35 ಸಾವಿರ ಲಂಚ ಪಡೆದುಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟ್ರಾರ್ಗಳು ಕಾನೂನು ಮೀರಿ ಸೈಟ್ ರಿಜಿಸ್ಟ್ರೇಷನ್ ಮಾಡ್ತಿದ್ದು, ಸೀನಿಯರ್ ಆಫೀಸರ್ಸ್ ತಿಂಗಳಿಗೆ 8 ಕೋಟಿ ಜೇಬಿಗಿಳಿಸಿ ಸುಮ್ಮನಿದ್ದಾರೆ.
ಕರ್ನಾಟಕದ ಶ್ರೀಮಂತ ಸಬ್ ರಿಜಿಸ್ಟ್ರಾರ್ ಕಚೇರಿ ಯಲಹಂಕದಲ್ಲಿದ್ದು, 100ಕ್ಕೂ ಹೆಚ್ಚು ಅಕ್ರಮ ಲೇಔಟ್ಗಳು ಯಲಹಂಕ ಸುತ್ತಮುತ್ತ ಇವೆ. ನಕಲಿ ದಾಖಲೆಗಳೊಂದಿಗೆ ನೂರಾರು ಲೇಔಟ್ಗಳ ಸೈಟ್ ರಿಜಿಸ್ಟ್ರೇಷನ್ ಆಗುತ್ತಿದೆ. ರಿಜಿಸ್ಟ್ರಾರ್ಗಳ ಲಂಚಾವತಾರ ಬಯಲಾಗುತ್ತಿದ್ದಂತೆ, ಇದೆಲ್ಲಾ ಕೇಳೋಕೆ ಯಾರೂ ಇಲ್ವಾ.. ಅಧಿಕಾರಿಗಳು ಆಡಿದ್ದೇ ಆಟನಾ..? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಒಂದು ವರ್ಷದಲ್ಲಿ ಯಾರ್ಯಾರು ಎಷ್ಟೆಷ್ಟು ರಿಜಿಸ್ಟ್ರೇಷನ್ ಮಾಡಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಯಬೇಕಿದೆ.
Post a comment
Log in to write reviews