2024-09-19 04:37:15

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮರು ಬಿಡುಗಡೆಗೆ ರೆಡಿಯಾದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ.

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈಗ ಹಳೆಯ ಸಿನಿಮಾಗಳ ದರ್ಬಾರ್ ಜೋರಾಗಿದೆ. ಸಾಲು ಸಾಲು ಹಳೆಯ ಸೂಪರ್ ಹಿಟ್ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಜಾಕಿ, ಅಂಜನಿಪುತ್ರ, ಪವರ್, ಉಪ್ಪಿ ಅಭಿನಯದ ಎ ಸಿನಿಮಾ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೃಷ್ಣ ನೀ ಬೇಗ ಬಾರೋ ಸಿನಿಮಾಗಳು ಮತ್ತೆ ರಿಲೀಸ್ ಆಗಿದ್ದು ಈ ಸಾಲಿಗೆ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸೇರ್ಪಡೆ ಆಗಲಿದೆ.
ಹೌದು, 2021 ಮಾರ್ಚ್ 11 ರಲ್ಲಿ ತೆರೆ ಕಂಡ  ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಶುಕ್ರವಾರ ಜೂನ್ 7 ಮರು ಬಿಡುಗಡೆ ಆಗಲಿದೆ. ನಟ ದರ್ಶನ್ ಅಭಿಮಾನಿಗಳಿಗೆ ಮಾಸ್ ಮಸಾಲಾ ಫೀಲ್ ನೀಡಿದ್ದ ರಾಬರ್ಟ್‌ ಸಿನಿಮಾ 2021ರ ಮಾರ್ಚ್ 11ರಂದು ಬಿಡುಗಡೆಗೊಂಡಿತ್ತು. ಭರ್ಜರಿ ಪ್ರದರ್ಶನ ಜೊತೆಗೆ ನೂರು ಕೋಟಿ ಬಾಕ್ಸ್ ಆಫೀಸ್ ಗೆ ಸೇರಿತ್ತು. ಅಲ್ಲದೇ ಈ ಸಿನಿಮಾ ಬಹುದಿನಗಳ ಬಳಿಕ ದರ್ಶನ್ ಅವರ ಹಿಟ್‌ ಸಿನಿಮಾ ಲಿಸ್ಟ್ ಗೂ ಸೇರ್ಪಡೆಗೊಂಡಿತ್ತು.
ಡಿ.ಬಾಸ್ ಅಭಿಮಾನಿಗಳು ರಾರ್ಬಟ್ ಸ್ವಾಗತಕ್ಕೆ ಭರ್ಜರಿ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ರಾಬರ್ಟ್ ನಲ್ಲಿ ಆಶಾ ಭಟ್ ನಾಯಕಿ ಆಗಿದ್ದು ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನ ಈ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಿದ್ದೂ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿರುವ 'ಕಣ್ಣು ಹೊಡಿಯಾಕ' ಹಾಡು ಸಾಕಷ್ಟು ಟ್ರೆಂಡ್ ಆಗಿತ್ತು. ಇದೀಗ ಮತ್ತೊಮ್ಮೆ ಮರು ಬಿಡುಗಡೆ ಆಗುವ ಮೂಲಕ ದರ್ಶನ ಚಿತ್ರಮಂದಿರ ದಲ್ಲಿ ತಮ್ಮ ಅಬ್ಬರ ಶುರುಮಾಡಲಿದ್ದಾರೆ.

Post a comment

No Reviews