
ಬೆಂಗಳೂರು: ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ಪೊಲೀಸ್ ಠಾಣೆಯಲ್ಲಿ 3 ರಾತ್ರಿ ಕಳೆದಿದ್ದಾರೆ.
ಸಿಸಿಟಿವಿ ಕ್ಯಾಮೆರಾ, ಸಿಡಿಆರ್ ಸೇರಿ ತಾಂತ್ರಿಕ ಸಾಕ್ಷ್ಯ ಮುಂದಿಟ್ಟುಕೊಂಡು ದರ್ಶನ್‌ರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೊದಲನೇ ದಿನ ನಿದ್ರೆಯಿಲ್ಲದೆ ಚಿಂತೆಗೆ ಜಾರಿದ್ದ ದರ್ಶನ್ ಎರಡನೇ ದಿನದ ರಾತ್ರಿ ಕೆಲ ತಾಸು ನಿದ್ದೆಗೆ ಜಾರಿದ್ದರು. ಪೊಲೀಸರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೂ
ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಎಂಬ ಉತ್ತರವನ್ನೇ ದರ್ಶನ್ ಹೇಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಪವಿತ್ರಾ ಗೌಡ ಅವರನ್ನು ಬುಧವಾರ ಸಂಜೆ ಪೊಲೀಸ್ ಠಾಣೆಯಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಗುರುವಾರ ಬೆಳಗ್ಗೆ ವಾಪಸ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸಂಜೆ 6ಕ್ಕೆ ಮತ್ತೆ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
Poll (Public Option)

Post a comment
Log in to write reviews